varthabharthi

ಸಿನಿಮಾ

ಮುಕ್ತಾಯದೆಡೆಗೆ ‘ಆಮಿ’

ವಾರ್ತಾ ಭಾರತಿ : 20 Oct, 2017

ಖ್ಯಾತ ಮಲಯಾಳಂ ಲೇಖಕಿ ಮಾಧವಿಕುಟ್ಟಿಯ ಜೀವನಕಥೆಯನ್ನು ಹೇಳುವ ‘ಆಮಿ’ ಚಿತ್ರದ ಶೂಟಿಂಗ್ ಮುಕ್ತಾಯದ ಘಟ್ಟದಲ್ಲಿದೆ. ಕಮಲ್ ಸಂವಿಧಾನದ ಈ ಬಹುನಿರೀಕ್ಷಿತ ಚಿತ್ರದ ಆರು ದಿನಗಳ ಶೂಟಿಂಗ್ ಮಾತ್ರವೇ ಬಾಕಿಯುಳಿದಿದೆಯಂತೆ. ನವೆಂಬರ್ ಮೊದಲ ವಾರದಲ್ಲಿ ಚಿತ್ರದ ಕೊನೆಯ ಹಂತದ ಶೂಟಿಂಗ್ ಕೊಚ್ಚಿಯಲ್ಲಿ ನಡೆಯಲಿದೆ. ಮಲಯಾಳಂನ ಪ್ರತಿಭಾವಂತ ನಟಿ ಮಂಜುವಾರಿಯರ್ ಆಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಕಮಲ್ ಸ್ವತಃ ಚಿತ್ರಕಥೆಯನ್ನು ಕೂಡಾ ಬರೆದಿದ್ದಾರೆ.

ಚಿತ್ರೀಕರಣಕ್ಕೆ ಮೊದಲೇ ‘ಆಮಿ’ ವಿವಾದಗಳಿಂದಲೇ ಸುದ್ದಿಯಲ್ಲಿತ್ತು. ‘ಆಮಿ’ಯಲ್ಲಿ ಆರಂಭದಲ್ಲಿ ವಿದ್ಯಾಬಾಲನ್ ನಟಿಸುವುದೆಂದು ನಿರ್ಧಾರವಾಗಿತ್ತು. ವಿದ್ಯಾಬಾಲನ್ ಕೂಡಾ ಒಪ್ಪಿಕೊಂಡಿದ್ದರು. ಆದರೆ ಚಿತ್ರೀಕರಣದ ಸಮಯ ಹತ್ತಿರವಾಗುತ್ತಿದ್ದಂತೆಯೇ ಆಕೆ ಚಿತ್ರದಿಂದ ಹೊರನಡೆದುಬಿಟ್ಟಿದ್ದರು. ಆನಂತರ ‘ಆಮಿ’ಯ ಪಾತ್ರಕ್ಕೆ ಒಂದೆರಡು ಪ್ರಮುಖ ನಟಿಯರು ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಅದು ಮಂಜುವಾರಿಯರ್‌ಗೆ ಒಲಿದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)