varthabharthi

ಸಿನಿಮಾ

ಜಿಲ್ಲಾಧಿಕಾರಿಯಾಗಿ ನಯನ್ಸ್

ವಾರ್ತಾ ಭಾರತಿ : 20 Oct, 2017

ದಕ್ಷಿಣ ಭಾರತದ ‘ಲೇಡಿ ಸೂಪರ್ ಸ್ಟಾರ್’ ನಯನತಾರಾ ನಾಯಕಿಯಾಗಿ ನಟಿಸಿರುವ ‘ಆರಾಂ ನವೆಂಬರ್’ ಚಿತ್ರ ನವೆಂಬರ್ 3 ರಂದು ತೆರೆಕಾಣಲಿದೆ. ತಮಿಳು-ತೆಲುಗಿನಲ್ಲಿ ಏಕಕಾಲದಲ್ಲಿ ತೆರೆಗೆ ಅಪ್ಪಳಿಸಿರುವ ಈ ಚಿತ್ರದಲ್ಲಿ ನಯನ್ಸ್ ಜಿಲ್ಲಾಧಿಕಾರಿಣಿಯ ಪಾತ್ರದಲ್ಲಿ ವಿಜೃಂಭಿಸಲಿದ್ದಾರೆ. ಬಾಲಕಾರ್ಮಿಕರು ಹಾಗೂ ಕೃಷಿಕರ ಶೋಷಣೆಯ ವಿರುದ್ಧ ಪ್ರಬಲ ಹೋರಾಟ ನಡೆಸುವ ಪಾತ್ರದಲ್ಲಿ ನಯನ್ಸ್ ಅದ್ಭುತವಾಗಿ ನಟಿಸಿದ್ದಾರೆಂಬ ಮೆಚ್ಚುಗೆಯ ಮಾತುಗಳು ಚಿತ್ರತಂಡದಿಂದ ಕೇಳಿಬರುತ್ತಿವೆ. ತೆಲುಗಿನಲ್ಲಿ ಚಿತ್ರಕ್ಕೆ ಕರ್ತವ್ಯ ಎಂದು ಹೆಸರಿಡಲಾಗಿದೆ. ಗೋಪಿ ನೈನಾ ಆ್ಯಕ್ಷನ್‌ಕಟ್ ಹೇಳಿದ್ದಾರೆ. ‘ಕಾಕಾ ಮೊಟ್ಟೆ’ ಖ್ಯಾತಿಯ ರಮೇಶ್ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ನಯನತಾರಾ, ನವೆಂಬರ್ 6 ಚಿತ್ರದ ಬಗ್ಗೆಯೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಬಹಳ ಸಮಯದ ಬಳಿಕ ಅವರು ಚಿತ್ರದ ಪ್ರಮೋಷನ್‌ಗಾಗಿ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಯನತಾರಾ ಗ್ಲಾಮರ್ ಪಾತ್ರಗಳಾದರೂ, ನಾಯಕಿ ಪ್ರಧಾನ ಕಥೆಗಳಿರುವ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಲು ಆಸಕ್ತಿ ವಹಿಸುತ್ತಿದ್ದಾರೆ. ಇದರ ಜೊತೆಗೆ ಫಹಾದ್ ಫಾಝಿಲ್, ಶಿವಕಾರ್ತಿಕೇಯನ್ ಪ್ರಮುಖ ಪಾತ್ರಗಳಲ್ಲಿರುವ ‘ವೇಲೈಕ್ಕಾರನ್’ ನಲ್ಲೂ ನಯನ್ಸ್ ನಾಯಕಿಯಾಗಿದ್ದು, ಅದು ಶೀಘ್ರದಲ್ಲೇ ತೆರೆಕಾಣಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)