ವಾಹನ, ರೈಲು ಹಳಿ ಅಳವಡಿಸುವ ಯಂತ್ರಕ್ಕೆ ಮಾವೋವಾದಿಗಳಿಂದ ಬೆಂಕಿ
ಜೈಪುರ, ಅ. 21: ಛತ್ತೀಸ್ಗಢದ ದಾಂಟೇವಾಡ ಜಿಲ್ಲೆಯಲ್ಲಿ ಶುಕ್ರವಾರ ಮಾವೋವಾದಿಗಳು ಕನಿಷ್ಠ ನಾಲ್ಕು ವಾಹನಗಳಿಗೆ ಹಾಗೂ ರೈಲು ಹಳಿ ಅಳವಡಿಸುವ ಯಂತ್ರಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಮೂರು ರೈಲು ನಿಲ್ದಾಣದ ಸಮೀಪ ಬೆಳಗ್ಗೆ 7.30ಕ್ಕೆ ಈ ಘಟನೆ ನಡೆದಿದೆ. ಈ ಸಂದರ್ಭ ಕಿರಾಂದುಲ್- ವಿಶಾಖಪಟ್ಟಣಂ ಮಾರ್ಗಕ್ಕೆ ಹಳಿ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಸುಮಾರು 24ಕ್ಕಿಂತಲೂ ಅಧಿಕ ಸಶಸ್ತ್ರ ಮಾವೋವಾದಿಗಳು ಕಾಮಗಾರಿ ನಡೆಯುತ್ತಿದ್ದ ನಿವೇಶನಕ್ಕೆ ತಲುಪಿದರು ಹಾಗೂ ವಾಹನಗಳು ಹಾಗೂ ಹಳಿ ಅಳವಡಿಸುವ ಯಂತ್ರಕ್ಕೆ ಬೆಂಕಿ ಹಚ್ಚಿದರು. ಘಟನೆ ಬಳಿಕ ಅವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story