varthabharthi

ನಿಧನ

ಉದ್ಯಮಿ ಮಾರೂರು ಪದ್ಮನಾಭ ಪೈ

ವಾರ್ತಾ ಭಾರತಿ : 22 Oct, 2017

 ಮಂಗಳೂರು, ಅ.22: ನಗರದ ಖ್ಯಾತ ಉದ್ಯಮಿ ಮಾರೂರು ಪದ್ಮನಾಭ ಪೈ (86) ಹೃದಯಾಘಾತದಿಂದ ರವಿವಾರ ಬೆಳಗ್ಗೆ ನಿಧನ ಹೊಂದಿದರು.

ಎದೆ ನೋವು ಕಾಣಿಸಿಕೊಂಡ ಅವರನ್ನು ರವಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಾರೂರು ಪದ್ಮನಾಭ ಪೈ ಆ್ಯಂಡ್ ಕಂಪೆನಿಯ ಸ್ಥಾಪರಾಗಿದ್ದರಲ್ಲದೆ, ದ.ಕ. ಆಟೊಮೊಬೈಲ್ ಆ್ಯಂಡ್ ಟೈರ್ ಡೀಲರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)