varthabharthi

ನಿಧನ

ಲಿಯೋ ಫೆರ್ನಾಂಡಿಸ್

ವಾರ್ತಾ ಭಾರತಿ : 23 Oct, 2017

ಬಣಕಲ್, ಅ.23: ಕೊಟ್ಟಿಗೆಹಾರದ ಅಜಾದ್‍ನಗರ ನಿವಾಸಿ ಲಿಯೋ ಫೆರ್ನಾಂಡಿಸ್ ಅವರು ಅಸೌಖ್ಯದಿಂದ ಅಸ್ವಸ್ಥರಾಗಿ ಮಂಗಳೂರಿನ ಅಸ್ಪತ್ರೆಯಲ್ಲಿ ನಿಧನರಾದರು.

ಲಿಯೋ ಫೆರ್ನಾಂಡಿಸ್ ಅವರು ಶ್ರಮ ಜೀವಿಯಾಗಿದ್ದು ಅವರ ಕೆಲಸದಲ್ಲಿ ಅವರು ಸದಾ ಮಗ್ನರಾಗಿದ್ದು ಸ್ವಾಭಿಮಾನಿಯಾಗಿದ್ದರು. ಅವರ ಕುಟುಂಬವು ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್ ನಿರ್ಮಾಣದ ಹಂತದಲ್ಲಿ ಕೊಡುಗೈ ಧಾನಿಯಾಗಿದ್ದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಕೊಟ್ಟಿಗೆಹಾರದ ಕ್ರೈಸ್ತ ಸ್ಮಶಾನದಲ್ಲಿ ಬುಧವಾರದಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Comments (Click here to Expand)