varthabharthi

ಗಲ್ಫ್ ಸುದ್ದಿ

ರೊಹಿಂಗ್ಯಾ ನಿರಾಶ್ರಿತರಿಗೆ 130 ಕೋಟಿ ರೂ.: ಸೌದಿ ಅರೇಬಿಯ ಭರವಸೆ

ವಾರ್ತಾ ಭಾರತಿ : 24 Oct, 2017

ಜಿನೇವ, ಅ. 24: ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ಮುಸ್ಲಿಮರಿಗೆ 20 ಮಿಲಿಯ ಡಾಲರ್ (ಸುಮಾರು 130 ಕೋಟಿ ರೂಪಾಯಿ) ನೆರವು ನೀಡುವುದಾಗಿ ಸೌದಿ ಅರೇಬಿಯ ಜಿನೇವದಲ್ಲಿ ಸೋಮವಾರ ನಡೆದ ರೊಹಿಂಗ್ಯಾ ನಿರಾಶ್ರಿತ ಬಿಕ್ಕಟ್ಟು ದೇಣಿಗೆ ಸಮ್ಮೇಳನದಲ್ಲಿ ಘೋಷಿಸಿದೆ.

ವಿಶ್ವಸಂಸ್ಥೆಯ ನಿರಾಶ್ರಿತರ ಕಮಿಶನರ್, ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ, ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ, ಐರೋಪ್ಯ ಒಕ್ಕೂಟ ಮತ್ತು ಕುವೈತ್ ಈ ಸಮ್ಮೇಳನವನ್ನು ಸಂಘಟಿಸಿವೆ.

ಮ್ಯಾನ್ಮಾರ್‌ನಿಂದ ಪರಾರಿಯಾಗಿರುವ ಒಟ್ಟು 10 ಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ಜೀವರಕ್ಷಕ ನೆರವು ನೀಡಲು 434 ಮಿಲಿಯ ಡಾಲರ್ (2822 ಕೋಟಿ ರೂಪಾಯಿ) ಸಂಗ್ರಹಿಸುವ ಗುರಿಯನ್ನು ಸೌದಿ ಹೊಂದಿದೆ ಎಂದು ಕಿಂಗ್ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ಕೇಂದ್ರ (ಕೆಎಸ್‌ರಿಲೀಫ್)ದ ನಿರ್ದೇಶಕ ಡಾ. ಯಾಹ್ಯಾ ಅಲ್ಶಮ್ಮರಿ ತಿಳಿಸಿದರು.

 

Comments (Click here to Expand)