varthabharthi

ನಿಮ್ಮ ಅಂಕಣ

ಪೂರ್ಣಯ್ಯ ದೇಶದ್ರೋಹಿ ಅಲ್ಲವೇ?

ವಾರ್ತಾ ಭಾರತಿ : 27 Oct, 2017
- ಸಿದ್ದಯ್ಯ, ಚಿಕ್ಕಮಾದೇಗೌಡ, ಟಿ.ನರಸೀಪುರ

ಮಾನ್ಯರೆ,

ಪೂರ್ಣಯ್ಯ ರಾಜದ್ರೋಹಿ ಮಾತ್ರವಲ್ಲ, ದೇಶದ್ರೋಹಿಯೂ ಹೌದು. ಇತಿಹಾಸ ತಿರುವಿ ನೋಡಿದಾಗ ಈ ಸತ್ಯ ಅರಿವಾಗುತ್ತದೆ. ದಿವಾನ್ ಪೂರ್ಣಯ್ಯ ಒಂದೆಡೆ ಅಧಿಕಾರಕ್ಕಾಗಿ ಕುತಂತ್ರಮಾಡಿ ಪರಕೀಯ ಆಕ್ರಮಣಕಾರರ ಜೊತೆ ಕೈಜೋಡಿಸಿ, ತಮ್ಮದೇ ರಾಜ ಟಿಪ್ಪುವಿನ ಸಾವಿಗೆ ಕಾರಣರಾಗಿ ರಾಜದ್ರೋಹಿಯಾದರೆ, ಮತ್ತೊಂದೆಡೆ ಬ್ರಿಟಿಷರ ಜೊತೆ ಕೈಜೋಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ವಿರೋಧಿಗಳಾಗಿಯೂ ಇದ್ದರು. ಟಿಪ್ಪು ಮರಣಾನಂತರ 1799ರಲ್ಲಿ ಮೈಸೂರು ರಾಜ್ಯದ ಆಡಳಿತವನ್ನು ಮೈಸೂರು ಅರಸು ಮನೆತನಕ್ಕೆ ಒಪ್ಪಿಸಬೇಕೆಂದು ಬ್ರಿಟಿಷರೊಡನೆ ಒಪ್ಪಂದವಾಯಿತು. ಆಗ ಮುಮ್ಮಡಿ ಕೃಷ್ಣರಾಜ ಒಡೆಯರ್ 5 ವರ್ಷದ ಬಾಲಕ. 1810ರವರೆಗೆ ಮಹಾರಾಣಿ ಲಕ್ಷ್ಮಮ್ಮಣ್ಣಿ ಮತ್ತು ದಿವಾನ್ ಪೂರ್ಣಯ್ಯನವರೂ ಆಡಳಿತ ನಡೆಸಬೇಕೆಂದು ಅಂದು ಒಪ್ಪಂದವಾಯಿತು. ಅಂದರೆ, ಈಗ ಹಿಂದುತ್ವವಾದಿಗಳು ಆರೋಪಿಸುವ ದೇಶದ್ರೋಹಿ, ಹಿಂದೂಗಳ ವಿರೋಧಿ, ಕನ್ನಡ ಭಾಷೆಯ ವಿರೋಧಿ ಟಿಪ್ಪುವಿನ ಆಸ್ಥಾನದಲ್ಲಿ ದಿವಾನರಾಗಿದ್ದ ಪೂರ್ಣಯ್ಯ, ಟಿಪ್ಪುಆಡಳಿತದ ನಂತರದ ಬ್ರಿಟಿಷರ ಸಾಮಂತ ರಾಜರ ಆಡಳಿತದಲ್ಲೂ ಅಧಿಕಾರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಮಾತ್ರವಲ್ಲ, ಅಡಳಿತದಲ್ಲಿ ಮತ್ತಷ್ಟು ಅಧಿಕಾರ ಹೆಚ್ಚಿಸಿಕೊಳ್ಳುತ್ತಾರೆ. 11 ವರ್ಷಗಳ ಕಾಲ ತಾವೇ ರಾಜ್ಯ ಆಳುತ್ತಾರೆ.

 

Comments (Click here to Expand)