varthabharthi

ನಿಮ್ಮ ಅಂಕಣ

ದಿಟ್ಟ ಉತ್ತರ

ವಾರ್ತಾ ಭಾರತಿ : 27 Oct, 2017
- ಸಿದ್ದು ಯಾದವ್ ಚಿರಿಬಿ

ಮಾನ್ಯರೆ,

1ನೆ ತರಗತಿಯಿಂದ 10ನೆ ತರಗತಿಯವರೆಗೂ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿದ ರಾಜ್ಯ ಸರಕಾರಕ್ಕೆ ಮೊದಲು ಕನ್ನಡಿಗರಾದ ನಾವು ಧನ್ಯವಾದಗಳನ್ನು ಹೇಳಬೇಕಿದೆ. ರಾಜ್ಯ ಸರಕಾರ ಸುತ್ತೊಲೆ ಹೊರಡಿಸಿ ಸುಮ್ಮನೆ ಕುಳಿತುಕೊಳ್ಳದೆ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ದಶಕಗಳ ಹೋರಾಟಕ್ಕೆ ಜಯ ದೊರೆತಂತಾಗುತ್ತದೆ. ಕುವೆಂಪು ಆದಿಯಾಗಿ ಎಲ್ಲಾ ಕನ್ನಡ ಕವಿಗಳು, ಚಿಂತಕರು, ಕನ್ನಡ ಹೋರಾಟಗಾರರು ಕಂಡ ಕನಸು ನನಸಾಗಲು ಸಾಧ್ಯ. ನಮ್ಮ ನಾಡು, ಧ್ವಜ, ಭಾಷೆಯನ್ನು ಕಿತ್ತುಕೊಂಡು ಹಿಂದಿಯನ್ನು ನಮ್ಮ ಮೇಲೆ ಬಲವಂತವಾಗಿ ಹೇರಲು ಬಂದ ನಮ್ಮ ನಾಡ ವಿರೋಧಿಗಳಿಗೆ ರಾಜ್ಯ ಸರಕಾರ ದಿಟ್ಟ ಉತ್ತರ ಕೊಟ್ಟಿದೆ. ಕನ್ನಡ ನವೆಂಬರ್ 1ಕ್ಕೆ ಮಾತ್ರ ಸೀಮಿತವಾಗಬಾರದು ಕನ್ನಡ ನಂಬರ್ ಒನ್ ಭಾಷೆಯಾಗಬೇಕು.

 

Comments (Click here to Expand)