varthabharthi

ಸಿನಿಮಾ

ಬಾಲಿವುಡ್ ಕ್ಯಾರವಾನ್ ನಲ್ಲಿ ದುಲ್ಕರ್

ವಾರ್ತಾ ಭಾರತಿ : 27 Oct, 2017

ಉಸ್ತಾದ್ ಹೊಟೇಲ್, ಬೆಂಗಳೂರು ಡೇಸ್, ಕಲಿ, ಚಾರ್ಲಿ ಹೀಗೆ ಮಲಯಾಳಂನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿರುವ ದುಲ್ಕರ್ ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ದುಲ್ಕರ್ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಬಾಲಿವುಡ್ ಚಿತ್ರ ಕ್ಯಾರವಾನ್‌ನ ಚಿತ್ರೀಕರಣ ಪೂರ್ಣಗೊಂಡಿದೆ. ರೋಡ್‌ಜರ್ನಿಯ ಕಥೆ ಹೇಳುವ ಈ ಚಿತ್ರದಲ್ಲಿ ದುಲ್ಕರ್ ಜೊತೆ, ಬಾಲಿವುಡ್‌ನ ಪ್ರತಿಭಾವಂತ ನಟ ಇರ್ಫಾನ್‌ಖಾನ್ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಟರ್‌ನೆಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ಮಿಥಿಲಾ ಪಾಲ್ಕರ್ ಚಿತ್ರದ ನಾಯಕಿ.

ಇಬ್ಬರು ತದ್ವಿರುದ್ಧ ವ್ಯಕ್ತಿತ್ವವುಳ್ಳವರು ಜೊತೆಯಾಗಿ ರಸ್ತೆ ಪಯಣ ಮಾಡುವಾಗ ಎದುರಾಗುವ ಸನ್ನಿವೇಶಗಳ ಕುರಿತಾದ ಕಥಾವಸ್ತುವನ್ನು ಕ್ಯಾರವಾನ್ ಹೊಂದಿದೆ. ಕಾಮಿಡಿ ಹಾಗೂ ಥ್ರಿಲ್ಲರ್‌ನ ಸಮ್ಮಿಶ್ರಣವಾದ ಈ ಚಿತ್ರದ ಬಹುತೇಕ ದೃಶ್ಯಗಳನ್ನು ಊಟಿ ಹಾಗೂ ಕೊಚ್ಚಿಗಳಲ್ಲಿ ಚಿತ್ರೀಕರಿಸಲಾಗಿದೆ. ಅಕಾಶ್ ಖುರಾನಾ, ಕ್ಯಾರವಾನ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

  ಇತ್ತೀಚೆಗೆ ತೆರೆಕಂಡ ದುಲ್ಕರ್ ಅಭಿನಯದ ಮಲಯಾಳಂ ಚಿತ್ರ ಸೊಲೊ, ಗೆಲುವಿನ ದಾರಿ ಹಿಡಿದಿದೆ. ಕ್ಯಾರವಾನ್ ಮುಗಿಸಿದ ಬಳಿಕ ಇರ್ಫಾನ್ ಖಾನ್ ತನ್ನ ಅಭಿನಯದ ‘ಖ್ವಾರಿಬ್ ಖ್ವಾರಿದ್’ ಸಿಂಗಲ್‌ನಲ್ಲಿ ಅಭಿನಯಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರದ ಮೂಲಕ ಮಲಯಾಳಂ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)