varthabharthi

ಸಿನಿಮಾ

ಜುಡ್ವಾ 2: ಬಾಕ್ಸ್‌ಆಫೀಸ್ ಗಳಿಕೆಯಲ್ಲೂ ನಂ.2

ವಾರ್ತಾ ಭಾರತಿ : 27 Oct, 2017

ಜುಡ್ವಾ 2 ಚಿತ್ರತಂಡಕ್ಕೊಂದು ಸಂತಸದ ಸುದ್ದಿ. ಡೇವಿಡ್ ಧವನ್ ನಿರ್ದೇಶನದ ಈ ಚಿತ್ರವು 2017ರಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಗರಿಷ್ಠ ಗಳಿಕೆಯನ್ನು ಕಂಡ ಎರಡನೆ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಹುಬಲಿ-2, ಈ ವರ್ಷ ಬಾಕ್ಸ್‌ಆಫೀಸ್‌ನಲ್ಲಿ ಗರಿಷ್ಠ ಹಣ ಸಂಗ್ರಹಿಸಿದ ಭಾರತೀಯ ಚಿತ್ರವೆನಿಸಿದೆ. ಆ ಮೂಲಕ ಈ ವರ್ಷದ ಇನ್ನೆರಡು ಸೂಪರ್‌ಹಿಟ್ ಚಿತ್ರಗಳಾದ ರಾಯೀಸ್ ಹಾಗೂ ಟಾಯ್ಲೆಟ್ ಏಕ್ ಪ್ರೇಮ್‌ಕಥಾದ ಸಮಗ್ರ ಗಳಿಕೆಯನ್ನು ಕೂಡಾ ಹಿಂದಿಕ್ಕಿದೆ.

1997ರಲ್ಲಿ ತೆರೆಕಂಡ, ಸಲ್ಮಾನ್‌ಖಾನ್ ಅಭಿನಯದ ಜುಡ್ವಾ ಚಿತ್ರದ ರಿಮೇಕ್ ಆಗಿರುವ, ಜುಡ್ವಾ 2ನಲ್ಲಿ ವರುಣ್‌ಧವನ್, ಜಾಕ್ವಲಿನ್ ಫೆರ್ನಾಂಡಿಸ್ ಹಾಗೂ ತಪ್ಸಿ ಪನ್ನೂ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆಪ್ಟ್ಟಂಬರ್ 29ರಂದು ವಿಶ್ವಾದ್ಯಂತ ತೆರೆಕಂಡ ಜುಡ್ವಾ 2, 4ನೆ ವಾರದಲ್ಲಿ 137.81 ಕೋಟಿ ರೂ. ಸಂಪಾದಿಸಿದೆ. ಈ ವರ್ಷದ ಇನ್ನೊಂದು ಹಿಟ್ ಚಿತ್ರ ರಾಯೀಸ್‌ನ 137.51 ಕೋಟಿ ರೂ. ಸಮಗ್ರ ಗಳಿಕೆಯನ್ನು ಕೇವಲ ನಾಲ್ಕೇ ವಾರಗಳಲ್ಲಿ ಹಿಂದಿಕ್ಕುವಲ್ಲಿ ಜುಡ್ವಾ 2 ಸಫಲವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)