varthabharthi

ನಿಮ್ಮ ಅಂಕಣ

ಮೀನು-ಮಾಂಸ ವರ್ಜ್ಯವಾದರೆ...

ವಾರ್ತಾ ಭಾರತಿ : 28 Oct, 2017
-ಸುಜೀರ್ ರಶ್ಮಿತ್ ಗೌಡ, ದರ್ಬೆ, ಪುತ್ತೂರು

ಮಾನ್ಯರೆ,

ಸಿದ್ದರಾಮಯ್ಯರಂತೆ ಮೀನು ತಿಂದು ದೇವಸ್ಥಾನಕ್ಕೆ ಹೋಗುವುದು ವರ್ಜ್ಯ ಎಂದು ಸಂಘ ಪರಿವಾರದವರು ಬೊಬ್ಬೆ ಹಾಕುತ್ತಿರುವುದರಿಂದ ನನ್ನದೊಂದು ಪುಟ್ಟ ಸಲಹೆ. ಎಲ್ಲಾ ದೇವಸ್ಥಾನಗಳಲ್ಲೂ ಇನ್ನು ಮುಂದೆ ಮೆಟಲ್- ಡಿಟೆಕ್ಟರ್‌ನಂತೆಯೇ ಮಟನ್-ಡಿಟೆಕ್ಟರ್ ಅಳವಡಿಸಲು ವ್ಯವಸ್ಥೆ ಮಾಡಬೇಕು. ಭಕ್ತರು ಮೀನು ಮಾಂಸ ತಿಂದು ಬಂದರೆ ಅದು ಮಟನ್ ಡಿಟೆಕ್ಟರ್‌ನಲ್ಲಿ ಗೊತ್ತಾಗಿ ಅವರನ್ನು ದೇವಸ್ಥಾನದ ಒಳಗೆ ಬರದಂತೆ ತಡೆಯಬಹುದು. ಹೀಗೆಯೇ ಅರ್ಚಕರು ಮಲ-ಮೂತ್ರ ತುಂಬಿರುವ ದೇಹದೊಂದಿಗೆ ಗರ್ಭಗುಡಿ ಹೊಕ್ಕು ದೇವರನ್ನು ಮುಟ್ಟಿ ಅಲಂಕರಿಸುವುದು ಮತ್ತು ಪೂಜೆ ಮಾಡುವುದು ವರ್ಜ್ಯವೆಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಅದಕ್ಕಾಗಿ ಅರ್ಚಕರಿಗೆ ದಿನಾಲೂ ‘ಎನಿಮಾ’ ಕೊಟ್ಟು ಅವರ ಹೊಟ್ಟೆಯಲ್ಲಿ ಸ್ವಲ್ಪವೂ ಮಲ-ಮೂತ್ರ ಇರದಂತೆ ಕೂಡಾ ನೋಡಿಕೊಳ್ಳಬೇಕು. ಇದಕ್ಕೆ ಎಲ್ಲಾ ದೇವಸ್ಥಾನಗಳಲ್ಲಿ ಒಬ್ಬ ಸರಕಾರಿ ಡಾಕ್ಟರ್ ಅಲ್ಲದಿದ್ದರೂ ಒಬ್ಬ ಕಂಪೌಂಡರ್‌ರನ್ನು ನೇಮಿಸಬೇಕು. ಮಾನವನ ದೇಹದಲ್ಲಿ ಸತತ ಮಲ-ಮೂತ್ರ ಸೃಷ್ಟಿ ಆಗುತ್ತಿರುವುದರಿಂದ ಪ್ರತಿ 15 ನಿಮಿಷಕ್ಕೆ ಒಮ್ಮೆ ಅರ್ಚಕರನ್ನು ಹಿಡಿದು ಎನಿಮಾ ಕೊಡಲೇಬೇಕು, ಇಲ್ಲದಿದ್ದರೆ ಅವರು ದೇವರಿಗೆ ಮಾಡುವ ಪೂಜೆ ಅಪವಿತ್ರ ಎಂದು ಪರಿಗಣಿಸಿ ಅರ್ಚಕರ ತಟ್ಟೆಗೆ ಭಕ್ತರು ಯಾರೂ ದಕ್ಷಿಣೆ ಹಾಕಬಾರದು.

 

Comments (Click here to Expand)