varthabharthi

ಗಲ್ಫ್ ಸುದ್ದಿ

ದೋಹಾ: ಕೆ.ಸಿ.ಎಫ್. ಸಾಹಿತ್ಯ ಕಲಾ ಒಕ್ಕೂಟ ಉದ್ಘಾಟನೆ

ವಾರ್ತಾ ಭಾರತಿ : 28 Oct, 2017

ದೋಹಾ, ಅ.28: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್.) ಕತರ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆ.ಸಿ.ಎಫ್. ಸಾಹಿತ್ಯ ಕಲಾ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕತರ್ ನ ದೋಹಾ ಮದೀನಾ ಖಲೀಫಾ ಸೆಂಟರ್ ನಲ್ಲಿ ಜರಗಿತು.

ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಎಂ.ಫ್ರೆಂಡ್ಸ್ ಟ್ರಸ್ಟ್ ಕಾರ್ಯದರ್ಶಿ ರಶೀದ್ ವಿಟ್ಲ, ಸಮಾಜದಲ್ಲಿ ಯಾವುದಾದರೂ ವಿಷಯದಲ್ಲಿ ಅಥವಾ ಯಾವುದೇ ಧರ್ಮ ಮತ್ತು ಪಂಗಡಗಳ ನಡುವೆ ಸಣ್ಣಪುಟ್ಟ ವಿವಾದಗಳು ಇದ್ದಲ್ಲಿ ಅದನ್ನು ಬಹು ದೊಡ್ಡ ವಿಷಯವಾಗಿ ಬರೆದು ಸಮಾಜದಲ್ಲಿ ಇನ್ನಷ್ಟು ವಿವಾದಗಳನ್ನು ಸೃಷ್ಟಿ ಮಾಡುವುದು ಬರಹಗಾರರಿಗೆ ಭೂಷಣವಲ್ಲ. ಈ ನಿಟ್ಟಿನಲ್ಲಿ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ಕಾರ್ಯಕ್ರಮ ಉದ್ಘಾಟಿಸಿದರು. ಯೂಸುಫ್ ಸಖಾಫಿ ಅಯ್ಯಂಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. 

ಉಮರ್ ಫಾರೂಕ್ ಕೃಷ್ಣಾಪುರ, ಅಂದುಮಾಯಿ ನಾವುಂದ, ಹನೀಫ್ ಪಾತೂರು, ಆಸಿಫ್ ಕರ್ಪಾಡಿ, ಮುಸ್ತಫಾ ಅಂಜಿಕ್ಕಾರ್, ರಝೀನ್ ಸುಳ್ಯ, ಮಿರ್ಷಾದ್ ಕನ್ಯಾನ ಮೊದಲಾದವರು ಮಾತನಾಡಿದರು.

ಇದೇ ಸಂದರ್ಭ ರಶೀದ್ ವಿಟ್ಲ ಅವರನ್ನು ಕೆ.ಸಿ.ಎಫ್. ಸಾಹಿತ್ಯ ಕಲಾ ಒಕ್ಕೂಟದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಿಶಾದ್ ಮಧುವನ ಸ್ವಾಗತಿಸಿದರು. ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು ವಂದಿಸಿದರು. ನಝೀರ್ ಮೂರ್ನಾಡು ಕಾರ್ಯಕ್ರಮ ನಿರೂಪಿಸಿದರು.

 

Comments (Click here to Expand)