ಶಾರ್ಜಾದಲ್ಲಿ ಕೈದಿಗಳಿಗೆ 'ಸ್ಮಾರ್ಟ್ ಬಳೆ'
ಇದರ ವಿಶೇಷತೆಗಳೇನು ಗೊತ್ತೇ?
ಶಾರ್ಜಾ, ಅ.28: ಜೈಲು ಸುಧಾರಣೆಯಲ್ಲಿ ಜಗತ್ತಿನ ಗಮನ ಸೆಳೆದ ಶಾರ್ಜಾ ಹೊಸ ಹೆಜ್ಜೆಯೊಂದನ್ನು ಇರಿಸಿದೆ. ಕೈದಿಗಳನ್ನು ಸುಲಭದಲ್ಲಿ ಗುರುತಿಸಲು ಅವರ ಆರೋಗ್ಯ, ಸುರಕ್ಷಾ ವಿಷಯಗಳನ್ನು ಕಾರ್ಯದಕ್ಷಗೊಳಿಸಲು ಸಾಧ್ಯವಾಗುವ ಸ್ಮಾರ್ಟ್ ಬಳೆಗಳನ್ನು ಶಾರ್ಜಾ ಪೊಲೀಸರು ಪರಿಚಯಿಸುತ್ತಿದ್ದು, ಮುಂದಿನ ವರ್ಷ ಇದು ಜಾರಿಗೆ ಬರಲಿದೆ ಎನ್ನಲಾಗಿದೆ.
ಮಧ್ಯಪೂರ್ವದಲ್ಲೇ ಇದು ಮೊದಲ ಪ್ರಯತ್ನವಾಗಿದೆ ಎಂದು ಶಾರ್ಜಾ ಪುನರ್ವಸತಿ ಕೇಂದ್ರದ ನಿರ್ದೇಶಕ ಅಹ್ಮದ್ ಸುಹೈಲ್ ಹೇಳಿದ್ದಾರೆ. ಕೈದಿಗಳ ಹೆಸರು, ಸಂಖ್ಯೆ, ಫೋಟೊ ಮತ್ತು ಇತರ ವಿವರಗಳು ದಾಖಲಿಸಲಾದ ಕೋಡ್ ಗಳು ಸ್ಮಾರ್ಟ್ ಬಳೆಗಳಲ್ಲಿ ಇರಲಿದೆ. ಕೈದಿಯ ಕೊಠಡಿಗಳಲ್ಲಿ ಇರಿಸಲಾದ ಸ್ಮಾರ್ಟ್ ಸ್ಕ್ರೀನ್ ಸಹಾಯದಿಂದ ಇದು ಕಾರ್ಯ ನಿರ್ವಹಿಸಲಿದೆ.
ಮೊದಲ ಹಂತದಲ್ಲಿ ಅರಬ್, ಇಂಗ್ಲಿಷ್ ನಂತರ ಉರ್ದು ಭಾಷೆಯಲ್ಲೂ ವಿವರ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಉದ್ಯೋಗಿಗಳಿಂದ ಬಂದ ಸ್ಮಾರ್ಟ್ ಬಳೆ ಸಲಹೆಗೆ ಶಾರ್ಜಾ ಮುಖ್ಯ ಪೊಲೀಸ್ ಕಮಾಂಡರ್ ಸೈಫಿ ಮುಹಮ್ಮದ್ ಅಲ್ ಸಅರಿ ಶಮ್ಸಿ ಒಪ್ಪಿಗೆ ನೀಡಿದ್ದರು.