ಪವಿತ್ರ ಝಮ್ಝಮ್ ಬಾವಿಯ ನವೀಕರಣ ಯೋಜನೆಗೆ ಅಸ್ತು
ಜಿದ್ದಾ,ಅ.29: ಪವಿತ್ರ ಮಕ್ಕಾ ಮಸೀದಿಯ ಆವರಣದಲ್ಲಿರುವ ಝಮ್ಝಮ್ ಸಿಹಿನೀರಿನ ಬಾವಿಯನ್ನು ನವೀಕರಿಸುವ ಯೋಜನೆಗೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅನುಮೋದನೆ ನೀಡಿದ್ದಾರೆ.
ಈ ಯೋಜನೆಯಲ್ಲಿ ಎಂಟು ಮೀಟರ್ ಅಗಲದ ಹಾಗೂ 120 ಮೀಟರ್ ವಿಸ್ತೀರ್ಣದ ಐದು ಮೇಲ್ಸೆತುವೆಗಳ ನಿರ್ಮಾಣ ಕೂಡಾ ಸೇರಿದೆಯೆಂದು ಪವಿತ್ರ ಮಕ್ಕಾ ಮಸೀದಿಯ ವ್ಯವಹಾರಗಳ ಅಧ್ಯಕ್ಷ ಅಲ್ ಸುದೈಸ್ ಅವರು ಸೌದಿ ಅಲ್-ಅಕ್ಬರಿಯಾ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಝಮ್ಝಮ್ ಬಾವಿಯ ಜೀರ್ಣೋದ್ಧಾರದ ಯೋಜನೆಯನ್ನು ಏಳು ತಿಂಗಳುಗಳೊಳಗೆ, ಪವಿತ್ರ ರಮ್ಝಾನ್ ತಿಂಗಳಿಗೆ ಮುನ್ನ ಪೂರ್ತಿಗೊಳಿಸಲಾಗುವುದು ಸುದೈಸ್ ತಿಳಿಸಿದ್ದಾರೆ.
Next Story