varthabharthi

ನಿಮ್ಮ ಅಂಕಣ

ಜನಧನ್: ಹೀಗೊಂದು ಪ್ರಶ್ನೆ

ವಾರ್ತಾ ಭಾರತಿ : 30 Oct, 2017
- ಸಿದ್ದಯ್ಯ, ಚಿಕ್ಕಮಾದೇಗೌಡ, ತಿ.ನರಸೀಪುರ

ಮಾನ್ಯರೆ,

ದೇಶದ ಎಲ್ಲಾ ಬಡವರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿರುವುದೇ ನಮ್ಮ ಸಾಧನೆ ಎಂಬ ಮೋದಿ ಭಕ್ತರ ಪ್ರಚಾರ ಮತ್ತೊಂದು ಬೊಗಳೆಯೇ? ಧರ್ಮಸ್ಥಳ ಕ್ಷೇತ್ರ ವ್ಯಾಪ್ತಿಯಲ್ಲಿ 40 ಲಕ್ಷ ಜನಧನ ಖಾತೆ ತೆರೆಯುವುದೂ ಸೇರಿದಂತೆ ಕೆಲ ಒಪ್ಪಂದಗಳಿಗೆ ಬ್ಯಾಂಕ್ ಅಧಿಕಾರಿಗಳು ಇಂದಿನ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಸಹಿ ಹಾಕಲಿದ್ದಾರಂತೆ! ಇದರರ್ಥ, ದೇಶದಲ್ಲಿ ಕೋಟ್ಯಂತರ ಜನರಿಗೆ ಇದುವರೆಗೂ ಬ್ಯಾಂಕ್ ಖಾತೆ ಹೊಂದಲು ಆಗಿಲ್ಲ ಎಂಬ ಸತ್ಯ ತಿಳಿಯುತ್ತದೆ.

ಜನಧನ ಯೋಜನೆ ಘೋಷಣೆಯಾದ ದಿನ ನನ್ನದೊಂದು ಪ್ರತಿಕ್ರಿಯೆ ಹೀಗಿತ್ತು ಹಾಲು ಕರೆಯಲು ಪಾತ್ರೆ ಬಂತು, ಹಾಲು ಕೊಡುವ ಹಸುವೇ ಇಲ್ಲ. ಆರ್ಥಿಕವಾಗಿ ಅಸಹಾಯಕರಾಗಿರುವ ಜನರಿಗೆ ಹಾಲು ಕೊಡುವ ಹಸು ಕೊಟ್ಟರೆ, ಹಾಲು ಕರೆಯಲು ಪಾತ್ರೆ ತಾವೇ ಕೊಂಡುಕೊಳ್ಳುತ್ತಾರೆ. ಅಂದರೆ, ದುಡಿಮೆ ಬಯಸುವ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವಂತಹ ಸನ್ನಿವೇಶ ಸೃಷ್ಟಿಸಿ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡಬೇಕು. ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದಾಗ, ತಮಗೆ ಬರುವ ಆದಾಯದಲ್ಲಿ ತಮ್ಮ ಜೀವನ ವೆಚ್ಚ ಕಳೆದು ಒಂದಷ್ಟು ಹಣ ಉಳಿತಾಯ ಆಗುವಂತಾದರೆ, ತಾವೇ ಸ್ವ ಇಚ್ಛೆಯಿಂದ ಬ್ಯಾಂಕ್ ಖಾತೆ ತೆರೆಯಲು ಮುಂದಾಗುತ್ತಾರೆ.

ಅಡುಗೆ ಅನಿಲ ಸೇರಿದಂತೆ ಇತರ ಪಡಿತರ ವಸ್ತುಗಳ ಮೇಲಿನ ಸಬ್ಸಿಡಿ ಹಿಂಪಡೆಯುವ ಗುಪ್ತ ಅಜೆಂಡಾ ಹೊಂದಿದ ’ಫಲಾನುಭವಿಗಳ ಖಾತೆಗೆ ನೇರ ನಗದು ಯೋಜನೆ’ಯ ಯಶಸ್ಸಿಗಾಗಿ ಮೋದಿ ಸರಕಾರ ಜನಧನ ಯೋಜನೆ ಜಾರಿಗೆ ತಂದರೆ, ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದ ಆಡಳಿತದ ಮಂಡಳಿ ನಡೆಸುತ್ತಿರುವ ಹಣಕಾಸು ಲೇವಾದೇವಿ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು, ಜನಧನ ಖಾತೆಗೆ 40 ಲಕ್ಷ ಜನರನ್ನು ಸೇರಿಸಲು ವೀರೇಂದ್ರ ಹೆಗ್ಗಡೆ ಮುಂದಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)