varthabharthi

ಗಲ್ಫ್ ಸುದ್ದಿ

ನ.1ರಿಂದ ಶಾರ್ಜಾದಲ್ಲಿ ಅಂತಾರಾಷ್ಟ್ರೀಯ ಪುಸ್ತಕ ಮೇಳ

ವಾರ್ತಾ ಭಾರತಿ : 30 Oct, 2017

ಶಾರ್ಜಾ, ಅ. 30: ಜಗತ್ಪ್ರಸಿದ್ಧ  36ನೆ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳವು  ನ.1 ರಿಂದ 11ರವರೆಗೆ ಶಾರ್ಜಾ ಎಕ್ಸ್ಪೋ ಸೆಂಟರ್ ನಲ್ಲಿ ನಡೆಯಲಿದೆ.

ಶಾಂತಿ ಪ್ರಕಾಶನ, ಮಂಗಳೂರು ತಮ್ಮ ಪುಸ್ತಕ ಮಳಿಗೆಯನ್ನು ಅದರಲ್ಲಿ ತೆರೆಯಲಿದ್ದು, ಅದರ ಪ್ರಥಮ ಆಮಂತ್ರಣ ಪತ್ರಿಕೆಯನ್ನು  ಯು.ಎ.ಇ. ಎಕ್ಸ್ಚೇಂಜ್ ಇದರ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರಿಗೆ ನೀಡುವ ಮೂಲಕ  ಬಿಡುಗಡೆಗೊಳಿಸಲಾಯಿತು. 

ಈ ವರ್ಷದ ಪ್ರತಿಷ್ಠಿತ 'ಪಿಂಗಾರ ಪ್ರಶಸ್ತಿ'ಗೆ ಭಾಜನರಾದ  ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಶಾಂತಿ ಪ್ರಕಾಶನದ ಪರವಾಗಿ ಅಭಿನಂದಿಸಲಾಯಿತು.

ಅಬ್ದುಲ್ ಖಾದರ್ ಕುಕ್ಕಾಜೆ ಮತ್ತು ಜಾಫರ್ ಸಾದಿಕ್ ಅವರು ಶಾಂತಿ ಪ್ರಕಾಶನವನ್ನು ಪ್ರತಿನಿಧಿಸಿದ್ದರು. ಮುಹಮ್ಮದ್ ಅಲಿ ಉಚ್ಚಿಲ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

 

Comments (Click here to Expand)