varthabharthi

ಗಲ್ಫ್ ಸುದ್ದಿ

ಯಮನ್‌ನಲ್ಲಿ ಆರೋಗ್ಯ ರಕ್ಷಣೆಗೆ ಕೆಎಸ್‌ರಿಲೀಫ್, ರೆಡ್ ಕ್ರಾಸ್ ಒಪ್ಪಂದ

ವಾರ್ತಾ ಭಾರತಿ : 1 Nov, 2017

ಜಿದ್ದಾ, ನ. 1: ಯಮನ್‌ನ ಲಕ್ಷಾಂತರ ನಾಗರಿಕರಿಗೆ ನೆರವಾಗುವ ಆರೋಗ್ಯ ರಕ್ಷಣೆ ಯೋಜನೆಯೊಂದನ್ನು ಆರಂಭಿಸಲು ಕಿಂಗ್ ಸಲ್ಮಾನ್ ಹ್ಯುಮೇನಿಟೇರಿಯನ್ ಏಡ್ ಆ್ಯಂಡ್ ರಿಲೀಫ್ ಸೆಂಟರ್ (ಕೆಎಸ್‌ರಿಲೀಫ್) ಸೋಮವಾರ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್‌ಸಿ)ಯೊಂದಿಗೆ ಒಪ್ಪಂವೊಂದಕ್ಕೆ ಸಹಿ ಹಾಕಿದೆ.

ಕೆಎಸ್‌ರಿಲೀಫ್ ಜನರಲ್ ಸೂಪರ್‌ವೈಸರ್ ಅಬ್ದುಲ್ಲಾ ಅಲ್-ರಬೀಆ ಮತ್ತು ಜಿಸಿಸಿಯಲ್ಲಿ ಐಸಿಆರ್‌ಸಿ ಮುಖ್ಯಸ್ಥರಾಗಿರುವ ಯಾಹ್ಯಾ ಅಲ್-ಉಲೈಬಿ ರಿಯಾದ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಯಮನ್‌ನಲ್ಲಿ ಗಾಯಗೊಂಡಿರುವವರಿಗೆ ನಿರಂತರ ವೈದ್ಯಕೀಯ ನೆರವು ಮತ್ತು ಉನ್ನತ ದರ್ಜೆಯ ಸೇವೆಗಳನ್ನು ನೀಡಲು ಈ ಒಪ್ಪಂದವು ಅವಕಾಶ ಮಾಡಿಕೊಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)