varthabharthi

ನಿಮ್ಮ ಅಂಕಣ

ಕುಡುಕರ ಸಮಸ್ಯೆ

ವಾರ್ತಾ ಭಾರತಿ : 2 Nov, 2017
-ನಿರ್ಮಲಾ ಟಿ., ಲಕ್ಕಿಹಳ್ಳಿ, ಹೊಸದುರ್ಗ

ಮಾನ್ಯರೆ,

ಮದ್ಯದಂಗಡಿಗೆ ಅನ್ವಯವಾಗುವ ಹೆಚ್ಚಿನ ನಿಯಮಗಳು ನಗರಗಳಿಗೆ ಮಾತ್ರ ಸೀಮಿತವಾಗಿದ್ದು, ಹಾಗಾಗಿ ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳ ಸಮಸ್ಯೆ ಮಿತಿಮೀರಿದೆ. ಹಳ್ಳಿಯ ಜನತೆಯ ಕಷ್ಟದ ದುಡಿತದ ಹಣ, ಕ್ಷಣದ ಖುಷಿಗೋಸ್ಕರ ಸಾರಾಯಿ ಅಂಗಡಿಯ ಪಾಲಾಗುತ್ತಿದ್ದು, ಬಡಕುಟುಂಬಗಳು ಬೀದಿಪಾಲಾಗುತ್ತಿವೆ. ಅಲ್ಲದೆ ಕುಡಿದವರು ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡುವುದು, ಮೈಮೇಲೆ ಬೀಳುವ ಘಟನೆಗಳು ಸಾಮಾನ್ಯವಾಗುತ್ತಿವೆ. ಮದ್ಯದ ಅಂಗಡಿಯಿರುವ ದಾರಿಯ ಅಕ್ಕ ಪಕ್ಕದ ಮಹಿಳೆಯರು ಓಡಾಡಲು ತುಂಬಾ ಯೋಚಿಸಬೇಕಾಗಿದೆ.

ಆದ್ದರಿಂದ ಸಂಬಂಧಿತರು ಇನ್ನಾದರೂ ಹಳ್ಳಿಗಳಲ್ಲಿನ ಮದ್ಯದಂಗಡಿಗಳ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವರೇ?

 

Comments (Click here to Expand)