varthabharthi

ವಿಶೇಷಾಂಕ

ಮಂಟೋ ಟಿಪ್ಪಣಿಗಳು

ವಾರ್ತಾ ಭಾರತಿ : 2 Nov, 2017
ಎ.ಎಸ್. ಪುತ್ತಿಗೆ

ಸಮಾಜ

ಈ ಕಥೆಗಳನ್ನು ಸಹಿಸಲು ನಿಮಗೆ ಸಾಧ್ಯವಾಗುವುದಿಲ್ಲವೇ? ಹಾಗಾದರೆ ಸಮಾಜವೇ ಅಸಹನೀಯವಾಗಿದೆ. ಸಮಾಜದ ಬಟ್ಟೆ ಬಿಚ್ಚಲು, ನಾನು ಯಾರು? ಸಮಾಜವು ಸ್ವತಃ ನಗ್ನವಾಗಿದೆ.

ನೆನಪು

ಕಳೆದು ಹೋದ ಕಾಲವನ್ನು ನೆನಪಿಸಿಕೊಳ್ಳುವುದು, ನನ್ನ ಪ್ರಕಾರ ಕಾಲ ಹರಣದ ಚಟುವಟಿಕೆಯಾಗಿದೆ. ಗತಕಾಲದ ಸಂಗತಿಗಳನ್ನು ನೆನೆದು ಕಣ್ಣೀರಿಟ್ಟು ನಾವು ಸಾಧಿಸು ವುದಾದರೂ ಏನನ್ನು? ನಾನು ಏನಿದ್ದರೂ ವರ್ತಮಾನವನ್ನೇ ನೋಡುತ್ತೇನೆ. ಹಿಂದೆ ಘಟಿಸಿದ್ದು ಗತಿಸಿ ಆಯಿತು. ಮುಂದೆ ನಡೆಯಲಿರುವ ಎಲ್ಲವೂ ನಡೆಯಲಿದೆ. ಅಷ್ಟೇ.

ಬದುಕಿನ ಜಟಿಲತೆ

ನನಗನಿಸುತ್ತಿದೆ, ನಾನು ಯಾವಾಗಲೂ ಕೈಗೆ ಸಿಕ್ಕಿದ್ದನ್ನೆಲ್ಲಾ ಹರಿದು ಚಿಂದಿ ಮಾಡುತ್ತಿರುತ್ತೇನೆ ಮತ್ತು ಪುನಃ ಎಲ್ಲವನ್ನು ಹೊಲಿದು ಮತ್ತೆ ಜೋಡಿಸುತ್ತಿರುತ್ತೇನೆ.

ಸ್ವಾತಂತ್ರ್ಯದ ಮರೀಚಿಕೆ

ಭಾರತ ಸ್ವತಂತ್ರವಾಯಿತು. ಪಾಕಿಸ್ತಾನ ಸ್ವತಂತ್ರ ದೇಶವಾಗಿಯೇ ಹುಟ್ಟಿತು. ಆದರೆ ಎರಡೂ ಕಡೆಯ ಮನುಷ್ಯರು ಮೊದಲಿಂದಲೇ ಗುಲಾಮರಾಗಿದ್ದರು, ಈಗಲೂ ಗುಲಾಮರಾಗಿದ್ದಾರೆ. ಧರ್ಮ, ಸಂಕುಚಿತವಾದಗಳ ಗುಲಾಮರು, ಕ್ರೌರ್ಯ ಮತ್ತು ಅಮಾನುಷತೆಯ ಗುಲಾಮರು.

ಪ್ರೀತಿ 

 ಮುಲ್ತಾನ್ ಇರಲಿ, ಸೈಬೀರಿಯಾ ಇರಲಿ, ಬೇಸಿಗೆ ಇರಲಿ, ಚಳಿಗಾಲವಿರಲಿ, ಶ್ರೀಮಂತರಿರಲಿ, ಬಡವರಿರಲಿ, ಚಂದದವರಿರಲಿ, ಕುರೂಪಿಗಳಿರಲಿ, ಒರಟರಿರಲಿ, ಸುಸಂಸ್ಕೃತರಿರಲಿ. ಪ್ರೀತಿ ಮಾತ್ರ ಎಲ್ಲೆಡೆ ಎಲ್ಲರ ಪಾಲಿಗೆ ಒಂದೇ ಆಗಿರುತ್ತದೆ. ಅದರಲ್ಲಿ ವ್ಯತ್ಯಾಸವಿರುವುದಿಲ್ಲ.

ಸ್ತ್ರೀ ಪುರುಷರು

ಪುರುಷನಾದವನು ಏನೆಲ್ಲಾ ಮಾಡಿದರೂ ಅವನು ಪುರುಷನಾಗಿಯೇ ಉಳಿಯುತ್ತಾನೆ. ಸ್ತ್ರೀ ಮಾತ್ರ, ಪುರುಷರು ತನಗೆ ಕೊಟ್ಟ ಪಾತ್ರವನ್ನು ನಿರ್ವಹಿಸುವಾಗ ಒಂದು ಹೆಜ್ಜೆ ತಪ್ಪಿ ನಡೆದರೂ ಆಕೆಯನ್ನು ವೇಶ್ಯೆ ಎಂದು ಕರೆಯುತ್ತಾರೆ.

ಘರ್ಷಣೆ

ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಜಗಳಾಡಿ ರಕ್ತ ಹರಿಸುತ್ತಾರೆ. ಮಸೀದಿಯಲ್ಲಾಗಲಿ ಮಂದಿರದಲ್ಲಾಗಲಿ ಜೊತೆ ಸೇರದ ಅವರ ರಕ್ತ, ನಾಲೆಗಳಲ್ಲಿ ಮಾತ್ರ ಪರಸ್ಪರ ಬೆರೆತು ಹರಿಯುತ್ತವೆ.

ಯುದ್ಧ

ಯುದ್ಧವು ಬೆಲೆ ಏರಿಕೆಯನ್ನು ಕಬರಸ್ಥಾನದವರೆಗೂ ತಲುಪಿಸಿ ಬಿಟ್ಟಿದೆ.

ಸಾದಾತ್ ಹಸನ್ ಮಂಟೋ (1912 ರಿಂದ 1955)

ಲಾಹೋರ್ ಮೂಲದ ಖ್ಯಾತ, ವಿವಾದಾಸ್ಪದ ಕತೆಗಾರ

 

Comments (Click here to Expand)