varthabharthi

ನಿಧನ

ಮೋಹನ್ ಶೆಣೈ

ವಾರ್ತಾ ಭಾರತಿ : 2 Nov, 2017

ಬೆಳ್ತಂಗಡಿ, ನ. 2: ರಣಜಿ ಕ್ರಿಕೆಟ್ ತಂಡದ ಮಾಜಿ ಆಟಗಾರ ಉಜಿರೆಯ ಶ್ರೀಕೂಡಿಗೆ ಮೋಹನ್ ಶೆಣೈ (82) ಗುರುವಾರ ಮಧ್ಯಾಹ್ನ ಅಲ್ಪಕಾಲದ ಅಸ್ವಾಸ್ಥ್ಯದಿಂದ ನಿಧನರಾದರು.

ಕರ್ನಾಟಕ ವಿದ್ಯಾಲಯ ( ಇಂದಿನ ಎಸ್.ಡಿ.ಎಮ್.) ಮೊದಲ ಸಾಲಿನ ವಿದ್ಯಾರ್ಥಿಯಾಗಿದ್ದ ಇವರು ಉಜಿರೆಯ ಎಸ್‌ಡಿಎಂ ಕಾಲೇಜಿನ ಕೆಮೆಸ್ಟ್ರಿ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಪೂನಾ ವಿಶ್ವವಿದ್ಯಾಲಯದ  ಎಂಎಸ್ಸಿ ಪದವೀಧರರಾದ ಇವರು ಮಹಾರಾಷ್ಟ್ರ ರಣಜಿ ಕ್ರಿಕೆಟ್ ತಂಡವನ್ನು ಕೆಲಕಾಲ ಪ್ರತಿನಿಧಿಸಿದ್ದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)