varthabharthi

ವಿಶೇಷಾಂಕ

ಶ್ರೀರಾಮನ ಕುರಿತು ಮಹಾಕವಿ ಅಲ್ಲಮಾ ಇಕ್ಬಾಲ್ ಬರೆದ ಉರ್ದು ಕವಿತೆಯ ಕನ್ನಡ ಸಾರ

ವಾರ್ತಾ ಭಾರತಿ : 2 Nov, 2017
ಅನುವಾದ: ಎ. ಫೌಝಿಯಾ, ಪುತ್ತಿಗೆ

ರಾಮ್

ಲಬ್ರೇಝ್ ಹಯ್ ಶರಾಬೆ ಹಕೀಕತ್ ಸೆ ಜಾಮೆ ಹಿಂದ್ ಸಬ್ ಫಲ್ಸಫೀ ಹೈಂ ಖಿತ್ತ ಎ ಮಗ್ರಿಬ್ ಕೆ ರಾಮೆ ಹಿಂದ್

ಸತ್ಯ ತುಂಬಿ ತುಳುಕುತ್ತಿದೆ ಭಾರತದ ಮಧುಪಾತ್ರೆಯಲ್ಲಿ ಪಶ್ಚಿಮದ ಜ್ಞಾನಿಗಳೆಲ್ಲ ತಲೆದೂಗಿರುವರು ಭಾರತದ ಮಹಿಮೆಗೆ

-----------

ಏ ಹಿಂದಿಯೊಂಕೆ ಫಿಕ್ರೆ ಫಲಕ್ ರಸ್ ಕಾ ಹೈ ಅಸರ್ ರಫ್ ಅತ್ ಮೇ ಆಸ್ಮಾನ್ ಸೆ ಭೀ ಊಂಚಾ ಹೈ ಬಾಮೆ ಹಿಂದ್

ಭಾರತೀಯರ ಉನ್ನತ ವಿಚಾರಗಳ ಫಲವಿದು ತನ್ನ ಮಹಿಮೆಯಲಿ ಈ ದೇಶ ಬಾನಿನ ಎತ್ತರವನ್ನು ಮೀರಿದೆ

-----------

ಇಸ್ ದೇಸ್ ಮೇ ಹುವೆ ಹೈಂ ಹಝಾರೊಂ ಮಲಕ್ ಸರಿಶ್ತ್ ಮಶ್ಹೂರ್ ಜಿನ್ ಕೆ ದಂ ಸೆ ಹಯ್ ದುನಿಯಾ ಮೇ ನಾಮೆ ಹಿಂದ್

ಸಾವಿರಾರು ದಿವ್ಯ ವ್ಯಕ್ತಿಗಳು ಗತಿಸಿರುವರು ಈ ದೇಶದಲ್ಲಿ ಅವರಿಂದಲೇ ಇಂದು ಜಗದಲಿ ಎಲ್ಲೆಡೆ ಭಾರತದ ಹೆಸರಿದೆ

-----------

ಹೈ ರಾಮ್ ಕೇ ವುಜೂದ್ ಪೆ ಹಿಂದೂಸ್ತಾನ್ ಕೋ ನಾಜ್ ಅಹ್ಲೇ ನಝರ್ ಸಮಜ್ತೇ ಹೈಂ ಉಸ್ಕೊ ಇಮಾಮ್ ಎ ಹಿಂದ್

ರಾಮನ ವ್ಯಕ್ತಿತ್ವವೆಂದರೆ ಅಭಿಮಾನವಿದೆ ಭಾರತಕ್ಕೆ ಅವನೇ ನಮ್ಮ ನಾಯಕ ಎಂದು ಭಾರತದ ಜಾಣರು ಅನ್ನುತ್ತಾರೆ

-----------

ಎಜಾಝ್ ಉಸ್ ಚಿರಾಘೆ ಹಿದಾಯತ್ ಕಾ ಹಯ್ ಎಹೀ ರೋಷನ್ ತರ್ ಅಝ್ ಸಹರ್ ಹಯ್ ಝಮಾನೇ ಮೇ ಶಾಮ್ ಎ ಹಿಂದ್

ದಾರಿ ತೋರುವ ಆ ದೀಪದ ಮಹಿಮೆ ಇದು ಭಾರತದ ಇರುಳು ಜಗದ ಪಾಲಿಗೆ ಹಗಲಿಗಿಂತ ಉಜ್ವಲವಾಗಿದೆ

-----------

ತಲ್ವಾರ್ ಕಾ ಧನೀ ಥಾ ಶುಜಾಅತ್ ಮೇ ಫರ್ದ್ ಥಾ ಪಾಕೀಜ್ ಗೀ ಮೆ, ಜೋಶೆ ಮೊಹಬ್ಬತ್ ಮೇ ಫರ್ದ್ ಥಾ.

ಖಡ್ಗದ ಪ್ರವೀಣನವನು, ಶೌರ್ಯದಲ್ಲಿ ಅನುಪಮನು, ಪಾವಿತ್ರದಲ್ಲಿ, ಪ್ರೀತಿಯ ಆವೇಶದಲ್ಲಿ ಅನನ್ಯ ಅವನ ಹಿರಿಮೆ.

 

Comments (Click here to Expand)