varthabharthi

ನಿಮ್ಮ ಅಂಕಣ

ಹಸಿದ ಮನುಷ್ಯರ ಕುರಿತು ಚಿಂತಿಸಲಿ

ವಾರ್ತಾ ಭಾರತಿ : 3 Nov, 2017
-ಆರ್. ಎಚ್. ಇಟಗಿ ಆರ್. ಟಿ., ನಗರ, ಬೆಂಗಳೂರು

ಮಾನ್ಯರೆ,

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀನು ತಿಂದು ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳವನ್ನು ಅಪವಿತ್ರಗೊಳಿಸಿದರೆಂದು ಆರೋಪ ಮಾಡಿ ವಿರೋಧ ಪಕ್ಷ ಬಿಜೆಪಿ ತೀವ್ರ ಸ್ವರೂಪದ ವಾಗ್ದಾಳಿ ನಡೆಸುತ್ತಿದೆ. ಆದರೆ ಇಂತಹ ಆರೋಪ ಮಾಡುವವರು ತುತ್ತು ಅನ್ನಕ್ಕಾಗಿ ತನ್ನ ಒಡಲ ಕುಡಿಯನ್ನೇ ಮಾರುವಂತಹ ತಾಯಂದಿರು ನಮ್ಮ ನಡುವೆ ಇದ್ದಾರೆ ಎಂಬುದನ್ನು ಮರೆತಂತಿದೆ. ಆದ್ದರಿಂದ ವಿರೋಧ ಪಕ್ಷ ಬಿಜೆಪಿಯು ಮೀನು, ಮಾಂಸ ತಿನ್ನುವ ಕುರಿತು ಚರ್ಚಿಸಿ ಕಾಲಹರಣ ಮಾಡುವುದಕ್ಕಿಂತ ರಾಜ್ಯದಲ್ಲಿ ನಿತ್ಯ ಹಸಿವಿನಿಂದ ಒದ್ದಾಡುತ್ತಿರುವ ಮನುಷ್ಯರ ಕುರಿತು ಸರಕಾರದ ಗಮನವನ್ನು ಸೆಳೆಯುವುದು ಉತ್ತಮವಲ್ಲವೇ? 

 

Comments (Click here to Expand)