varthabharthi

ಸಿನಿಮಾ

ರಾಜರಥದಲ್ಲಿ ಆರ್ಯ

ವಾರ್ತಾ ಭಾರತಿ : 3 Nov, 2017

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ರಂಗಿತರಂಗ ಚಿತ್ರತಂಡದ ನೂತನ ಸಿನೆಮಾ ರಾಜರಥದಲ್ಲಿ ತಮಿಳಿನ ಖ್ಯಾತ ನಟ ಆರ್ಯ ನಟಿಸಲಿದ್ದಾರೆಂಬ ಬಲವಾದ ಊಹಾಪೋಹಗಳು ಕೇಳಿಬಂದಿತ್ತು. ಈ ಬಗ್ಗೆ ನಿರೂಪ್ ಭಂಡಾರಿ ಕೂಡಾ ಆರ್ಯ ನಟಿಸುವ ಸಾಧ್ಯತೆಯ ಸುಳಿವು ನೀಡಿದ್ದರು. ಅಂತೂ ಈಗ ಆರ್ಯ ನಟಿಸುವುದು ಕನ್‌ಫರ್ಮ್ ಆಗಿದೆ. ರಾಜರಥ ಕಳೆದ ವಾರ ಬಿಡುಗಡೆಗೊಳಿಸಿದ ಪೋಸ್ಟರ್‌ನಲ್ಲಿ ಆರ್ಯ ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಪೋಸ್ಟರ್‌ಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದು, ವೈರಲ್ ಆಗಿದೆ. ಕಾಲಿವುಡ್‌ನ ಆರ್ಯಗೆ ಇದು ಚೊಚ್ಚಲ ಕನ್ನಡ ಚಿತ್ರವಾಗಿರುವುದರಿಂದ ಸ್ಯಾಂಡಲ್‌ವುಡ್ ಪ್ರೇಕ್ಷಕ ಬಳಗ ಕೂಡಾ ಅತಿಯಾದ ನಿರೀಕ್ಷೆಯಿಟ್ಟುಕೊಂಡಿದೆ.

ರಾಜರಥದಲ್ಲಿ ಆರ್ಯ ಅತ್ಯಂತ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರಾದರೂ ಅದೇನೆಂಬುದನ್ನು ಗುಟ್ಟಾಗಿಟ್ಟಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ರಂಗಿತರಂಗದ ತಾರೆಯರಾದ ನಿರೂಪ್ ಭಂಡಾರಿ ಹಾಗೂ ಅವಂತಿಕಾಶೆಟ್ಟಿ ನಾಯಕ, ನಾಯಕಿಯರಾಗಿದ್ದಾರೆ.

 

Comments (Click here to Expand)