varthabharthi

ಸಿನಿಮಾ

ಪ್ರಿಯಾಂಕಾ 'ವೆಂಟಿಲೇಟರ್'ಗೆ ಪ್ರಶಸ್ತಿಗಳ ಸುರಿಮಳೆ

ವಾರ್ತಾ ಭಾರತಿ : 3 Nov, 2017

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ, ಅಲ್ಲೂ ಸ್ಟಾರ್‌ಪಟ್ಟ ಗಿಟ್ಟಿಸಿಕೊಂಡ ಪ್ರಿಯಾಂಕಾ ಚೋಪ್ರಾ ನಿರ್ಮಾಪಕಿಯಾಗಿಯೂ ಹೆಸರು ಮಾಡಿದ್ದಾರೆ. ಆಕೆಯೇ ತನ್ನ ಹೋಂಬ್ಯಾನರ್‌ನಲ್ಲಿ ನಿರ್ಮಿಸಿದ ಮರಾಠಿ ವೆಂಟಿಲೇಟರ್ ಈ ಸಾಲಿನ ಐದು ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದು ಭರ್ಜರಿ ಸಾಧನೆ ಮಾಡಿದೆ.

ರಾಜೇಶ್ ಮಾಪುಸ್ಕರ್ ನಿರ್ದೇಶನದ ವೆಂಟಿಲೇಟರ್, ಮೂಲಕತೆ,ಅತ್ಯುತ್ತಮ ಚಿತ್ರಕತೆ, ಸಂಕಲನಕ್ಕಾಗಿನ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದೆ. ಚಿತ್ರದ ನಿರ್ದೇಶಕ ರಾಜೇಶ್ ಮಾಪುಸ್ಕರ್‌ಗೆ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ ದೊರೆತರೆ, ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿಗೆ ಸಂಜಯ್ ವೌರ್ಯ ಹಾಗೂ ಅಲ್ವಿನ್ ರೇಗೋ ಭಾಜನರಾಗಿದ್ದಾರೆ. ತನ್ನ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ಐದು ಪ್ರಶಸ್ತಿಗೆ ಐದು ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿರುವುದು ಪಿ.ಸಿ.ಗೆ ಇನ್ನಿಲ್ಲದ ಹಿಗ್ಗು ತಂದಿದೆ. ಈ ಬಗ್ಗೆಇಡೀ ಚಿತ್ರತಂಡಕ್ಕೆ ಅಭಿನಂದನೆಯ ಸಂದೇಶಗಳನ್ನು ರವಾನಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಡಾ. ಮಧು ಚೋಪ್ರಾ ವೆಂಟಿಲೇಟರ್‌ನ ಸಹ ನಿರ್ಮಾಪಕರಾಗಿದ್ದರು.

ಫ್ಯಾಮಿಲಿ ಡ್ರಾಮಾ ಕಥಾವಸ್ತುವಿನ ಈ ಚಿತ್ರವು ಒಟ್ಟು 15 ಮರಾಠಿ ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮಕರಣಗೊಂಡಿತ್ತಾದರೂ, ಅಂತಿಮವಾಗಿ 5 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ ಮರಾಠಿ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಕಲಾವಿದರನ್ನು ಒಳಗೊಂಡ ಈ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಹಾಗೂ ಬೊಮ್ಮನ್ ಇರಾನಿ ಅವರ ಲವಲವಿಕೆಯ ಅಭಿನಯ ಚಿತ್ರರಸಿಕರ ಮನಗೆದ್ದಿತ್ತು.

ಕುಸಿಯುತ್ತಿರುವ ಕೌಟುಂಬಿಕ ವೌಲ್ಯಗಳು, ಪರಂಪರೆಗಳು ಹಾಗೂ ಮಾನವೀಯ ಸಂಬಂಧಗಳ ಬಗ್ಗೆ ಕ್ಷಕಿರಣ ಬೀರುವ ವೆಂಟಿಲೇಟರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)