varthabharthi

ಸಿನಿಮಾ

ಮತ್ತೆ ಬೆಳ್ಳಿತೆರೆಗೆ 'ನಝ್ರಿಯಾ'

ವಾರ್ತಾ ಭಾರತಿ : 3 Nov, 2017

ವಿವಾಹದ ಬಳಿಕ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ನಝ್ರಿಯಾ ನಝೀಂ ಮತ್ತೆ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ಅಂಜಲಿ ಮೆನನ್ ನಿರ್ದೇಶನದ ಮಲಯಾಳಂ ಚಿತ್ರವೊಂದರಲ್ಲಿ ಆಕೆ ನಾಯಕಿಯಾಗಿ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಪಾರ್ವತಿ ಹಾಗೂ ಪೃಥ್ವಿರಾಜ್, ಅತುಲ್ ಕುಲಕರ್ಣಿ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ನಝ್ರಿಯಾ, ಸೂಪರ್‌ಹಿಟ್ ಚಿತ್ರ ಬೆಂಗಳೂರು ಡೇಸ್‌ನ ತನ್ನ ಸಹನಟ ಫಹದ್ ಫಾಝಿಲ್ ಜೊತೆ ವಿವಾಹವಾಗಿದ್ದರು. ಆನಂತರ ಆಕೆ ಸ್ವಲ್ಪ ಸಮಯ ಚಿತ್ರರಂಗದಿಂದ ದೂರವಿದ್ದರು. ಇದೀಗ ಬೆಂಗಳೂರು ಡೇಸ್‌ನ ನಿರ್ದೇಶಕಿ ಅಂಜಲಿ ಮೆನನ್ ಚಿತ್ರದ ಮೂಲಕವೇ ನಝ್ರಿಯಾ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ನಝ್ರಿಯಾಗೆ ಉತ್ತಮ ಚಿತ್ರಕಥೆ ದೊರೆತಲ್ಲಿ ಆಕೆ ನಟಿಸಲಿದ್ದಾಳೆಂದು ಫಹದ್ ಫಾಝಿಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಳು. ಮಹಿಳಾ ಪ್ರಧಾನ ಕಥಾವಸ್ತುವಿರುವ ಈ ಚಿತ್ರದ ಶೂಟಿಂಗ್ ಆರಂಭಗೊಂಡಿದ್ದು, ಕೇರಳ, ತಮಿಳು ಹಾಗೂ ಯುಎಇಯಲ್ಲಿ ಚಿತ್ರೀಕರಣಗೊಳ್ಳಲಿದೆ.

 

Comments (Click here to Expand)