varthabharthi

ನಿಮ್ಮ ಅಂಕಣ

ಜನಪ್ರತಿನಿಧಿಗಳ ಪ್ರಕರಣ ಶೀಘ್ರ ತನಿಖೆಯಾಗಲಿ

ವಾರ್ತಾ ಭಾರತಿ : 4 Nov, 2017
-ಶಂಶೀರ್ ಬುಡೋಳಿ, ಬೆಂಗಳೂರು

ಮಾನ್ಯರೆ,

ರಾಜಕೀಯ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳ ವ್ಯಕ್ತಿತ್ವ ಹರಣ ಮಾಡಲು ಗಂಭೀರ ಆರೋಪ ಹೊರಿಸುವುದು ಸಾಮಾನ್ಯವಾಗುತ್ತಿದೆ.
ಆದರೆ ರಾಜಕೀಯ ವ್ಯಕ್ತಿಗಳ ವಿರುದ್ಧದ ಪ್ರಕರಣಗಳ ತನಿಖೆ ಸಾಧ್ಯತೆ ಬಹಳ ಕಡಿಮೆ. ಇದೆಲ್ಲವೂ ರಾಜಕೀಯ ಆಟದ ಮೈದಾನದಲ್ಲಿ ಗುಂಪಿನಲ್ಲಿ ಗೋವಿಂದ ಎನ್ನುವಂತಾಗುತ್ತದೆ. ಹೀಗಾಗಿ ಶೀಘ್ರವೇ ಶಾಸಕರು ಹಾಗೂ ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳ ತ್ವರಿತ ವಿಚಾರಣೆಗೆಂದೇ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್, ಕೇಂದ್ರ ಸರಕಾರಕ್ಕೆ ಕಾರ್ಯಯೋಜನೆ ರೂಪಿಸುವಂತೆ ಹೇಳಿರುವುದು ಸ್ವಾಗತಾರ್ಹ ನಡೆ. ಕೂಡಲೇ ಕೇಂದ್ರ ಸರಕಾರ ಈ ಬಗ್ಗೆ ಕಾರ್ಯ ಯೋಜನೆ ರೂಪಿಸಬೇಕಾಗಿದೆ.

 

Comments (Click here to Expand)