varthabharthi

ಇ-ಜಗತ್ತು

ಐಫೋನ್ xನ ರಿಪೇರಿ ತುಂಬ ದುಬಾರಿ,ಗೊತ್ತೇ?

ವಾರ್ತಾ ಭಾರತಿ : 5 Nov, 2017

ಆ್ಯಪಲ್ ಫುಲ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ ತನ್ನ ಪ್ರಪ್ರಥಮ ಸ್ಮಾರ್ಟ್‌ಫೋನ್ ಐಫೋನ್ xನ್ನು ಮೊನ್ನೆಯಷ್ಟೇ ಭಾರೀ ಬೇಡಿಕೆಯ ನಡುವೆ ಬಿಡುಗಡೆಗೊಳಿಸಿದೆ.

ತುಂಬ ದುಬಾರಿ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡೇ ಬಂದಿರುವ ಐಫೋನ್ xಗೆ 89,000 ರೂ.(64ಜಿಬಿ) ಮತ್ತು 1,02,000 ರೂ.(256 ಜಿಬಿ) ಬೆಲೆಗಳನ್ನು ನಿಗದಿಗೊಳಿಸಲಾಗಿದೆ. ಆಕಸ್ಮಿಕವಾಗಿ ಈ ಫೋನ್ ಕೈ ಜಾರಿ ಕೆಳಗೆ ಬಿದ್ದರೆ ಮತ್ತು ಅದರ ಬೆಝೆಲ್ ಲೆಸ್ ಡಿಸ್‌ಪ್ಲೇ ಬಳಿ ಹಾನಿಯುಂಟಾದರೆ ಅದು ಜೇಬಿಗೆ ಭಾರೀ ತೂತನ್ನುಂಟು ಮಾಡುವುದು ಖಂಡಿತ.

ಮ್ಯಾಕ್‌ರೂಮರ್ಸ್ ವರದಿ ಮಾಡಿರುವಂತೆ ಹಾನಿಗೀಡಾದ ಐಫೋನ್ xನ ಡಿಸ್‌ಪ್ಲೇ ಬದಲಿಸಬೇಕಿದ್ದರೆ ಸುಮಾರು 18,300 ರೂ.ಗಳು ಕೈಬಿಡುತ್ತವೆ. ಐಫೋನ್ 8ಕ್ಕಾದರೆ 11,000 ರೂ. ಮತ್ತು ಐಫೋನ್ 6ಕ್ಕಾದರೆ ಈ ಕೆಲಸ 8,300 ರೂ.ಗಳಲ್ಲಿ ಮುಗಿಯುತ್ತದೆ. ಇವುಗಳಿಗೆ ಹೋಲಿಸಿದರೆ ಐಫೋನ್ xಬೆಲೆಯಲ್ಲಿ ಮಾತ್ರವಲ್ಲ, ರಿಪೇರಿಯಲ್ಲಿಯೂ ತುಂಬ ದುಬಾರಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)