varthabharthi

ನಿಮ್ಮ ಅಂಕಣ

ಪ್ರಾಕೃತಿಕ ವಿಕೋಪ ಎದುರಿಸಲು ಕರಾವಳಿ ಜಿಲ್ಲೆ ಸಜ್ಜಾಗಿಲ್ಲ

ವಾರ್ತಾ ಭಾರತಿ : 6 Nov, 2017
- ಅಬ್ದುಲ್ ಸಲಾಂ, ತೊಕ್ಕೊಟ್ಟು

ಮಾನ್ಯರೆ,

ವಿಜ್ಞಾನಿಗಳು ದಕ್ಷಿಣದ ಕರಾವಳಿ ಪ್ರದೇಶಗಳಲ್ಲಿ ಭೂಕಂಪದಂಥಾ ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಒಂದೊಮ್ಮೆ ಈ ಭಾಗದಲ್ಲಿ ಭೂಕಂಪ ಸಂಭವಿಸಿದ್ದೇ ಆದಲ್ಲಿ ಎಲ್ಲೆಂದರಲ್ಲಿ ತಲೆಯೆತ್ತಿರುವ ಕಟ್ಟಡಗಳು ಕ್ಷಣಗಳಲ್ಲೇ ಸಮಾಧಿಗಳಾಗಿ ಪರಿವರ್ತನೆಯಾಗುವುದರಲ್ಲಿ ಸಂಶಯವಿಲ್ಲ. ಮಂಗಳೂರಿನಲ್ಲಿ ಯಾರು ಅಷ್ಟೊಂದು ಫ್ಲಾಟ್‌ಗಳನ್ನು ಖರೀದಿಸುತ್ತಾರೋ ತಿಳಿಯದು ಆದರೆ ಈಗ ನಗರದ ಸುತ್ತಮುತ್ತ ಎಲ್ಲಿ ನೋಡಿದರೂ ಬರೀ ಕಾಂಕ್ರಿಟ್ ಕಟ್ಟಡಗಳೇ ಕಾಣುತ್ತವೆ ಹೊರತು ಒಂದು ಹಿಡಿ ಖಾಲಿ ಜಾಗವಿಲ್ಲ. ಹಾಗಾಗಿ ಭೂಮಿ ಕೆಲವು ಸೆಕೆಂಡುಗಳು ಅದುರಿದರೂ ಎಲ್ಲಾ ಸುರಕ್ಷಾ ಕ್ರಮಗಳನ್ನು ಉಲ್ಲಂಘಿಸಿ ಅವೈಜ್ಞಾನಿಕವಾಗಿ ಕಟ್ಟಲಾಗಿರುವ ಕಟ್ಟಡಗಳು ಧರಾಶಾಹಿಯಾಗಿ ಜನರನ್ನು ಬಲಿಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. 

 

Comments (Click here to Expand)