varthabharthi

ಗಲ್ಫ್ ಸುದ್ದಿ

ಶಾರ್ಜಾ: ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆ ಉದ್ಘಾಟನೆ

ವಾರ್ತಾ ಭಾರತಿ : 6 Nov, 2017

ಶಾರ್ಜಾ, ನ.6: ಇಲ್ಲಿನ ಶಾರ್ಜಾ ಎಕ್ಸೃ್ಪೊ ಸೆಂಟರ್‌ನಲ್ಲಿ ನಡೆಯುತ್ತಿರುವ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ದ್ವಿತೀಯ ಬಾರಿಗೆ ಭಾಗವಹಿಸಿದ ಶಾಂತಿ ಪ್ರಕಾಶನ ಸಂಸ್ಥೆಯ ಮಳಿಗೆಯನ್ನು ಗಲ್ಫ್ ಮೆಡಿಕಲ್ ಕಾಲೇಜು ಮತ್ತು ತುಂಬೆ ಗ್ರೂಪ್ ಅಜ್ಮಾನ್‌ನ ಸ್ಥಾಪಕಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮೊಯ್ದಿನ್ ತುಂಬೆ ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಪುಸ್ತಕಗಳ ಪ್ರಕಾಶನ ಮುಖಾಂತರ ಸಮಾಜದ ಎಲ್ಲ ಧರ್ಮಗಳ ನಡುವೆ ಸೌಹಾರ್ದಕ್ಕೆ ಶ್ರಮಿಸುತ್ತಿರುವ ಶಾಂತಿ ಪ್ರಕಾಶನ ಸಂಸ್ಥೆಯು ಇದೀಗ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲೂ ಕೂಡ ತನ್ನ ಮಳಿಗೆಯನ್ನು ತೆರೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಓದು ಪ್ರಕಾಶನ ಪ್ರಕಟಿಸಿ ಎ.ಕೆ. ಕುಕ್ಕಿಲರ ಎಣ್ಣೆ ಬತ್ತಿದ ಲಾಟೀನು ಕೃತಿಯನ್ನು ಬ್ಯಾರೀಸ್ ವೆಲ್ಫೇರ್ ಫಾರಮ್ ಅಬುದಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಬಿಡುಗಡೆಗೊಳಿಸಿದರು. ಕೃತಿಯ ಪ್ರಥಮ ಪ್ರತಿಯನ್ನು ಇರ್ಶಾದ್ ಮೂಡುಬಿದಿರೆಯವರಿಗೆ ಹಸ್ತಾಂತರಿಸಲಾಯಿತು.

ಶಾಂತಿ ಪ್ರಕಾಶನ ಪ್ರಕಟಿಸಿದ ಶೈಖ್ ಮುಹಮದ್ ಕಾರಕ್ಕುನ್ನು ರಚಿಸಿದ ಸಮೀನಾ ಉಪ್ಪಿನಂಗಡಿ ಕನ್ನಡಕ್ಕೆ ಅನುವಾದಿಸಿದ ಸ್ನೇಹ ಸಂವಾದ ಕೃತಿಯನ್ನು ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಬಿಡುಗಡೆಗೊಳಿಸಿದರು. ಆರೀಫ್ ಅಲಿ ಸಾಹೇಬ್ ಪ್ರಥಮ ಪ್ರತಿ ಸ್ವೀಕರಿಸಿದರು.

ಮಕ್ಕಳ ತರಬೇತಿ ಹೇಗೆ? ಎಂಬ ಕೃತಿಯನ್ನು ಬ್ಯಾರೀಸ್ ಕಲ್ಚರಲ್ ಫಾರಮ್ ದುಬೈ ಇದರ ಉಪಾಧ್ಯಕ್ಷ ಎಂ.ಇ. ಮೂಳೂರು ಬಿಡುಗಡೆಗೊಳಿಸಿದರು. ದುಬೈ ಬ್ಯಾರೀಸ್ ಕಲ್ಚರಲ್ ಫಾರಮ್ನ ಅಬ್ದುಲ್ ಲತೀಫ್ ಮುಲ್ಕಿ ಪ್ರಥಮ ಪ್ರತಿ ಸ್ವೀಕರಿಸಿದರು.

ಮುಖ್ಯ ಅತಿಥಿ ಗಳಾಗಿ ಶಾರ್ಜಾ ಕನ್ನಡ ಸಂಘದ ಅಧ್ಯಕ್ಷ ಸುಂದರ್ ರಾಜ್ ಬೇಕಲ್, ಕೊಂಕಣಿ ಸಾಹಿತ್ಯ ಪರಿಷತ್‌ನ ನೋಯಲ್ ಡಿ. ಅಲ್ಮೇಡಾ, ಅಲ್ ತಾಯಿಫ್ ಕಿಚನ್ ಎಕ್ಯೂಪ್‌ಮೆಂಟ್ಸ್‌ನ ಮಾಲಕ ತೋನ್ಸೆ ಕುದೂರ್ ಮುಹಮದ್ ರಫೀಕ್, ಮಲ್ಟಿ ಬಿಝ್ ಟ್ರೇಡಿಂಗ್‌ನ ಇಸ್ಮಾಯೀಲ್ ಬಾಳೆಹೊನ್ನೂರು, ಎಚ್‌ಎಂಸಿ ನಿರ್ದೇಶಕ ಶಕೀಲ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಯುಎಇ ಇದರ ಮುಖ್ಯಸ್ಥ ಆರೀಫ್ ಶರೀಫ್ ಅಬುದಾಬಿ ಮತ್ತು ಪದಾಧಿಕರಿಗಳಾದ ಬಾಷಾ ಸಾಹೇಬ್, ಅಬ್ದುಲ್ ಖಾದಿರ್ ಸಾಹೇಬ್ ಭಾಗವಹಿಸಿದ್ದರು,

ಅಬ್ದುಲ್ ಸಲಾಮ್ ದೇರಳಕಟ್ಟೆ ಕಿರಾಅತ್ ಪಠಿಸಿದರು. ಅಬ್ದುಲ್ ಸಲಾಮ್ ಯು. ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)