varthabharthi

ನಿಧನ

ಗೋಪಾಲ್ ರಾವ್

ವಾರ್ತಾ ಭಾರತಿ : 6 Nov, 2017

ಕಡಬ, ನ.06. ಕಡಬದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು, ನಿವೃತ್ತ ಶಿಕ್ಷಕ ಗೋಪಾಲ್ ರಾವ್ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಒಂದು ವಾರದ ಹಿಂದೆ ತೀವ್ರ ಅನಾರೋಗ್ಯದ ಕಾರಣದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಸಂಜೆ ಕೊನೆಯುಸಿರೆಳೆದರು. ಹಲವು ಪುಸ್ತಕಗಳನ್ನು ಬರೆದಿರುವ ಅವರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದರು.

 

Comments (Click here to Expand)