varthabharthi

ನಿಮ್ಮ ಅಂಕಣ

ಫಲಿತಾಂಶವನ್ನು ಮೊದಲೇ ಊಹಿಸಬಹುದೇ?

ವಾರ್ತಾ ಭಾರತಿ : 7 Nov, 2017
- ಪ್ರಶಾಂತ್ ಮುಂಡಾಳ್ವ, ಬಜ್ಪೆ

 ಮಾನ್ಯರೆ,

  ಇತ್ತೀಚೆಗೆ ಗುಜರಾತಿನಲ್ಲಿ ಚುನಾವಣಾ ಆಯೋಗ ಗುಜರಾತಿಗೆ ಕಳುಹಿಸಿದ್ದ ಇವಿಎಂ ಮತಯಂತ್ರ ಮತ್ತು ವಿವಿಪಿಎಟಿ ಮತಚೀಟಿ ಯಂತ್ರಗಳಲ್ಲಿ ಸುಮಾರು 5,000 ಯಂತ್ರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದಾಗ ಅವುಗಳಲ್ಲಿ ಸುಮಾರು 3,500 ಮತಚೀಟಿ ಯಂತ್ರಗಳು ದೋಷಪೂರಿತವಾಗಿದ್ದು, ಪರೀಕ್ಷಾರ್ಥವಾಗಿ ಬೇರೆ ಪಕ್ಷಕ್ಕೆ ವೋಟು ಹಾಕಿದಾಗಲೂ ಅವುಗಳೆಲ್ಲಾ ಬಿಜೆಪಿಗೆ ವೋಟು ಹಾಕಿದ ಮತಚೀಟಿ ತೋರಿಸುತ್ತಿದ್ದವು. ಹಾಗಾದರೆ ಎಲ್ಲಾ 72,000 ಯಂತ್ರಗಳಲ್ಲಿ ಇನ್ನೆಷ್ಟು ಯಂತ್ರಗಳು ದೋಷಪೂರಿತವಾಗಿದ್ದು ಕೇವಲ ಬಿಜೆಪಿಗೆ ಮತ ಹಾಕುವಂತೆ ಹ್ಯಾಕ್ ಆಗಿರಬಹುದೆಂದು ಊಹಿಸಿ?

ಉತ್ತರ ಪ್ರದೇಶದಲ್ಲಿ ಈ ಇವಿಎಂ ಹೇಗೆ ಹ್ಯಾಕ್ ಮಾಡಲಾಗಿತ್ತು ಎಂದರೆ -ಮೊದಲ ಐದು ಸಾವಿರ ವೋಟು ಆಯಾ ಪಕ್ಷಗಳವರಿಗೇ ಸರಿಯಾಗಿ ಬೀಳು ತ್ತಿತ್ತು. ಆದರೆ ಐದು ಸಾವಿರದ ನಂತರ ಬೇರೆ ಪಕ್ಷಕ್ಕೆ ಹಾಕಿದ ವೋಟುಗಳೂ ಬಿಜೆಪಿಗೇ ಬೀಳುತ್ತಿದ್ದವಂತೆ. ಮತದಾನಕ್ಕೆ ಮುಂಚೆ ಎಲ್ಲಾ ಪಕ್ಷದ ಪ್ರತಿನಿಧಿಗಳ ಮುಂದೆ ಕೇವಲ 25 ರಿಂದ 50 ಮತಗಳನ್ನು ಮಾತ್ರ ಚಲಾಯಿಸಿ ಮತಯಂತ್ರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತದೆ. ಹಾಗಾಗಿ ಐದು ಸಾವಿರದ ನಂತರವಷ್ಟೇ ಎಲ್ಲಾ ಮತಗಳು ಬಿಜೆಪಿಗೆ ಬೀಳುವಂತೆ ಹ್ಯಾಕ್ ಮಾಡಿದ್ದು ಉತ್ತರ ಪ್ರದೇಶದಲ್ಲಿ ಪತ್ತೆ ಆಗಲೇ ಇಲ್ಲ. ಈಗ ಗುಜರಾತಿನಲ್ಲಿ ಈ ರೀತಿ ಪ್ರತೀ ಮತಯಂತ್ರದಲ್ಲಿಯೂ ಐದು ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪ್ರಾಯೋಗಿಕವಾಗಿ ಹಾಕಿ ಚುನಾವಣೆಗೆ ಮುಂಚೆ ಪರೀಕ್ಷಿಸುವುದು ಅಸಾಧ್ಯ. ಯಾಕೆಂದರೆ 72,000 ಮತಯಂತ್ರಗಳಲ್ಲಿ ಪ್ರತಿಯೊಂದರಲ್ಲಿಯೂ ಐದು ಸಾವಿರಕ್ಕಿಂತ ಹೆಚ್ಚು ಮತ ಹಾಕಿ ಪರೀಕ್ಷಿಸುವುದಕ್ಕೆ ಸಮಯ ಹಾಗೂ ಇಂಜಿನಿಯರ್‌ಗಳು ಲಭ್ಯವಿಲ್ಲ. ಇನ್ನು ಉಳಿದಿರುವ ಕೆಲವೇ ದಿನಗಳಲ್ಲಿ ಎಲ್ಲಾ 72,000 ಯಂತ್ರಗಳಲ್ಲಿ ಪ್ರತಿಯೊಂದನ್ನೂ ನಂಬಿಗಸ್ಥ ಹಾರ್ಡ್‌ವೇರ್ ಇಂಜಿನಿಯರ್ ಮೂಲಕ ಪರೀಕ್ಷೆ ಮಾಡಿಸುವುದು ಅಸಾಧ್ಯದ ಮಾತು. ಹಾಗಾಗಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶವನ್ನು ಮೊದಲೇ ಊಹಿಸಬಹುದಾಗಿದೆ.

 

Comments (Click here to Expand)