varthabharthi

ಗಲ್ಫ್ ಸುದ್ದಿ

ಯುಎಇ ಯುವರಾಜನನ್ನು ಭೇಟಿಯಾದ ಅಲ್-ಹರೀರಿ

ವಾರ್ತಾ ಭಾರತಿ : 8 Nov, 2017

ಬೆರೂತ್, ನ. 8: ಕಳೆದ ವಾರ ರಾಜೀನಾಮೆ ನೀಡಿರುವ ಲೆಬನಾನ್ ಪ್ರಧಾನಿ ಸಆದ್ ಅಲ್-ಹರೀರಿ, ಯುಎಇ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಝೈದ್ ಅಲ್-ನಹ್ಯನ್ ಜೊತೆ ಮಾತುಕತೆ ನಡೆಸಲು ಮಂಗಳವಾರ ದುಬೈಗೆ ಪ್ರಯಾಣಿಸಿದ್ದಾರೆ.

ಇಬ್ಬರು ನಾಯಕರು ಲೆಬನಾನ್ ಮತ್ತು ಯುಎಇ ನಡುವಿನ ಸೋದರ ಸಂಬಂಧದ ಬಗ್ಗೆ ಹಾಗೂ ಲೆಬನಾನ್‌ನಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದರು ಎಂದು ಅಲ್-ಹರೀರಿಯ ಪತ್ರಿಕಾ ಕಚೇರಿ ತಿಳಿಸಿದೆ.

ಬಳಿಕ ಅವರು ರಿಯಾದ್‌ಗೆ ಮರಳಿದರು. ಅವರು ಕಳೆದ ವಾರ ರಿಯಾದ್‌ನಲ್ಲೇ ತನ್ನ ರಾಜೀನಾಮೆ ಘೋಷಿಸಿದ್ದರು. ಬಳಿಕ ಅವರು ರಿಯಾದ್‌         ನಲ್ಲೇ ಆಶ್ರಯ ಪಡೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)