varthabharthi

ಗಲ್ಫ್ ಸುದ್ದಿ

ದಾರುನ್ನೂರ್ ಕೇಂದ್ರ ಸಮಿತಿಯ ಪ್ರಮುಖರಿಗೆ ದುಬೈಯಲ್ಲಿ ಸ್ವಾಗತ

ವಾರ್ತಾ ಭಾರತಿ : 9 Nov, 2017

ದುಬೈ, ನ.9: ಮೂಡುಬಿದಿರೆಯ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ಇದರ ಯುಎಇ ರಾಷ್ಟ್ರೀಯ ಸಮಿತಿಯ 3ನೆ ವಾರ್ಷಿಕ ಮಹಾಸಭೆ ನ.10ರಂದು ದುಬೈಯಲ್ಲಿ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ದಾರುನ್ನೂರ್ ಕೇಂದ್ರ ಸಮಿತಿಯ ಪ್ರಮುಖರಿಗೆ ದುಬೈ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ದಾರುನ್ನೂರ್ ಯು.ಎ.ಇ. ಸಮಿತಿಯ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

ಮಂಗಳೂರಿನಿಂದ ದಾರುನ್ನೂರ್ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ, ನಿರ್ದೇಶಕ, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅದ್ಯಕ್ಷ ಅಲ್ಹಾಜ್ ಮುಹಮ್ಮದ್ ಮಸೂದ್, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಉದ್ಯಮಿ ಎಫ್. ಅಹ್ಮದ್ ಹಾಜಿ ಫರಂಗಿಪೇಟೆ, ಸೋನಾ ಬಝಾರ್ ಮಾಲಕ ಮಮ್ಮುಂಞಿ ಹಾಜಿ, ಕಾರ್ಯದರ್ಶಿಗಳಾದ ಉದ್ಯಮಿ ಐ.ಮೊಯ್ದಿನಬ್ಬ ಹಾಜಿ, ಉದ್ಯಮಿ ಶಾಹುಲ್ ಹಮೀದ್ ಮೆಟ್ರೊ ಹಾಜಿ, ಜನರಲ್ ಮ್ಯಾನೇಜರ್ ಉದ್ಯಮಿ ಹಾಸ್ಕೋ ಅಬ್ದುಲ್ ರಹಿಮಾನ್ ಹಾಜಿ, ಸದಸ್ಯರಾದ ಉದ್ಯಮಿ, ಹಾಜಿ ಮುಹಮ್ಮದ್ ಹಾರಿಸ್, ಉದ್ಯಮಿ ರಿಯಾಝುದ್ದೀನ್ ಹಾಜಿ ಬಂದರ್, ನೌಷಾದ್ ಹಾಜಿ ಸೂರಲ್ಪಾಡಿ, ದಾರುನ್ನೂರ್ ಎಜುಕೇಶನ್ ಅಕಾಡಮಿಯ ಪ್ರಾಂಶುಪಾಲ ಹುಸೈನ್ ರಹ್ಮಾನಿ ಮೊದಲಾದವರು ದುಬೈಗೆ ಆಗಮಿಸಿದರು.

ಇವರನ್ನು ದಾರುನ್ನೂರ್ ಕೇಂದ್ರ ಸಮಿತಿಯ ಪ್ರಮುಖರಾದ ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್, ಅಬ್ದುಲ್ ಸಲಾಂ ಬಪ್ಪಳಿಗೆ, ಮುಹಮ್ಮದ್ ರಫೀಕ್ ಆತೂರು, ಸಾಜಿದ್‌ಬಜ್ಪೆ, ಮುಹಮ್ಮದ್ ರಫೀಕ್ ಸುರತ್ಕಲ್, ನವಾಝ್ ಬಿ.ಸಿ.ರೋಡ್, ಅಶ್ರಫ್ ಪರ್ಲಡ್ಕ, ಸಂಶುದ್ದೀನ್ ಸೂರಲ್ಪಾಡಿ, ಸಫಾ ಇಸ್ಮಾಯೀಲ್ ಬಜ್ಪೆ, ಸಿರಾಜ್ ಬಿ.ಸಿ.ರೋಡ್, ಇಸ್ಮಾಯೀಲ್ ಸುರತ್ಕಲ್ ಮೊದಲಾದವರು ಆತ್ಮೀಯವಾಗಿ ಸ್ವಾಗತಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)