varthabharthi

ಗಲ್ಫ್ ಸುದ್ದಿ

ಸೌದಿ: ಮಹಿಳೆಯರಿಗಾಗಿ ವಾಹನ ಚಾಲನೆ ತರಬೇತಿ ಶಾಲೆ

ವಾರ್ತಾ ಭಾರತಿ : 9 Nov, 2017

ರಿಯಾದ್, ನ. 9: ಸೌದಿ ಅರೇಬಿಯದ ಸಾರಿಗೆ ಇಲಾಖೆ ಮತ್ತು ಜಿದ್ದಾದಲ್ಲಿರುವ ಕಿಂಗ್ ಅಬ್ದುಲಝೀಝ್ ವಿಶ್ವವಿದ್ಯಾನಿಲಯ (ಕೆಎಯು)ಗಳು ಜಂಟಿಯಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಹಿಳೆಯರಿಗಾಗಿ ವಾಹನ ಚಾಲನಾ ಶಾಲೆ ಆರಂಭಿಸಲು ಬುಧವಾರ ಒಪ್ಪಿಕೊಂಡಿವೆ.

 ಮುಂದಿನ ವರ್ಷದ ಜೂನ್ ತಿಂಗಳಿನಿಂದ ಸೌದಿ ಅರೇಬಿಯದಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ರಾಜಾಜ್ಞೆಯ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ ಮಹಿಳೆಯರಿಗೆ ಚಾಲನಾ ತರಬೇತಿಯನ್ನು ಈ ಶಾಲೆ ನೀಡಲಿದೆ.

ಕೆಎಯು ರೆಕ್ಟರ್ ಅಬ್ದುಲ್ ರಹಮಾನ್ ಅಲ್-ಯೌಬಿ ಮತ್ತು ಸಾರಿಗೆ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಮುಹಮ್ಮದ್ ಅಲ್-ಬಸ್ಸಮಿ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

 

Comments (Click here to Expand)