varthabharthi

ಅಂತಾರಾಷ್ಟ್ರೀಯ

ಕ್ವೆಟ್ಟಾದಲ್ಲಿ ಸ್ಫೋಟ: 3 ಸಾವು

ವಾರ್ತಾ ಭಾರತಿ : 9 Nov, 2017

ಕ್ವೆಟ್ಟಾ (ಪಾಕಿಸ್ತಾನ), ನ. 9: ಪಾಕಿಸ್ತಾನದ ಸಂಘರ್ಷಪೀಡಿತ ಬಲೂಚಿಸ್ತಾನ ಪ್ರಾಂತದಲ್ಲಿ ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ ಓರ್ವ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಪ್ರಾಂತೀಯ ರಾಜಧಾನಿ ಕ್ವೆಟ್ಟಾದಲ್ಲಿ ಪೊಲೀಸ್ ಅಧಿಕಾರಿ ಕೆಲಸಕ್ಕೆ ಹೋಗುತ್ತಿದ್ದಾಗ ಅವರ ವಾಹನವನ್ನು ಗುರಿಯಾಗಿಸಿ ಸ್ಫೋಟ ನಡೆಸಲಾಗಿದೆ.

ಮೂವರು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

 

Comments (Click here to Expand)