ಬೆರೂತ್, ನ. 9: ಸಿರಿಯದಲ್ಲಿ ಐಸಿಸ್ ಉಗ್ರರು ನಿಯಂತ್ರಣ ಹೊಂದಿದ್ದ ಕೊನೆಯ ಪಟ್ಟಣವನ್ನು ವಶಕ್ಕೆ ತೆಗೆದುಕೊಂಡಿದ್ದು, ಅವರ ವಿರುದ್ಧ ವಿಜಯ ಸಾಧಿಸಲಾಗಿದೆ ಎಂದು ಸಿರಿಯ ಸೇನೆ ಗುರುವಾರ ಘೋಷಿಸಿದೆ.
ಅಲ್ಬು ಕಮಲ್ ಪಟ್ಟಣದ ಹೊರವಲಯದ ಮರುಭೂಮಿಯಲ್ಲಿ ಸಿರಿಯ ಸೇನೆ ಮತ್ತು ಐಸಿಸ್ ಭಯೋತ್ಪಾದಕರ ನಡುವೆ ಈಗಲೂ ಯುದ್ಧ ನಡೆಯುತ್ತಿದೆ.