varthabharthi

ನಿಮ್ಮ ಅಂಕಣ

ನೋಟು ಅಮಾನ್ಯ: ಲಾಭವೇನು?

ವಾರ್ತಾ ಭಾರತಿ : 10 Nov, 2017
-ನಿರ್ಮಲ ಟಿ. ಲಕ್ಕಿಹಳ್ಳಿ, ಹೊಸದುರ್ಗ

ಮಾನ್ಯರೆ,

ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯ ಮಾಡಿ ಒಂದು ವರ್ಷವಾದರೂ ಅದರಿಂದಾದ ಜನರ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ನೋಟು ಅಮಾನ್ಯದ ಉದ್ದೇಶ ಕಪ್ಪುಹಣ ಹೊಂದಿರುವ ಭ್ರಷ್ಟಾಚಾರಿ ಕುಳಗಳನ್ನು ಬಯಲಿಗೆ ಎಳೆಯುವುದೆಂದು ಹೇಳಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಈ ನೋಟು ಅವಾಂತರದಿಂದಾಗಿ ಕಷ್ಟಪಡುತ್ತಿರುವುದು ಸಾಮಾನ್ಯ ಬಡಜನರಲ್ಲದೆ ಶ್ರೀಮಂತ ಕುಳಗಳಲ್ಲ. ಬ್ಯಾಂಕ್, ಎಟಿಎಂಗಳ ಎದುರು ಸರತಿ ಸಾಲಲ್ಲಿ ನಿಂತು ಬಸವಳಿದಿರುವುದು ಬಡಜನರೇ ಹೊರತು, ರಾಜಕಾರಣಿಗಳಲ್ಲ. ಈ ನೋಟು ಅಮಾನ್ಯದಿಂದಾಗಿ ನಿಶ್ಚಯವಾದ ಎಷ್ಟೋ ಮದುವೆಗಳು ನಿಂತು ಹೋದವು. ಹಲವರು ಸಂಕಷ್ಟಕ್ಕೊಳಗಾಗಿ ಪ್ರಾಣ ಕಳೆದುಕೊಂಡರು. ಕಪ್ಪುಕುಳಗಳು ಕೆಲವರಿಗೆ ಜುಜುಬಿ ಕಮಿಷನ್ ಕೊಟ್ಟು ಹಣ ಬದಲಾವಣೆ ಮಾಡಿಕೊಂಡರು. ಕೆಲವರು ಬ್ಯಾಂಕ್ ಸಿಬ್ಬಂದಿಗೆ ಲಂಚ ಕೊಟ್ಟು ಬದಲಾಯಿಸಿಕೊಂಡರು. ಆದರೆ ಅತೀ ಬಡವರು ಮಾತ್ರ ತಮ್ಮ ಮಕ್ಕಳ ಮದುವೆ, ಔಷಧಿ ವೆಚ್ಚಕ್ಕೆಂದು ಒಂದಿಷ್ಟು ಉಳಿತಾಯ ಮಾಡಿದ ಹಣಕ್ಕಾಗಿ ಎಷ್ಟೆಲ್ಲ ಕಷ್ಟಪಡಬೇಕಾಯಿತು. ಇದು ಭ್ರಷ್ಟಾಚಾರ ನಿರ್ಮೂಲನ ಕ್ರಮವೇ? ಉತ್ತರಿಸುವವರು ಯಾರು?

 

Comments (Click here to Expand)