varthabharthi

ಕ್ರೀಡೆ

'2020ರ ಟ್ವೆಂಟಿ-20 ವಿಶ್ವಕಪ್ ತನಕ ಧೋನಿ ಆಡಬೇಕು'

ವಾರ್ತಾ ಭಾರತಿ : 10 Nov, 2017

ಹೊಸದಿಲ್ಲಿ, ನ.9: ಇತ್ತೀಚೆಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕಳಪೆ ಬ್ಯಾಟಿಂಗ್ ಮಾಡುತ್ತಿರುವ ಮಹೇಂದ್ರ ಸಿಂಗ್ ಧೋನಿಯ ಬೆಂಬಲಕ್ಕೆ ನಿಂತಿರುವ ಭಾರತದ ಮಾಜಿ ವೇಗದ ಬೌಲರ್ ಆಶೀಷ್ ನೆಹ್ರಾ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿ 2020ರ ಟ್ವೆಂಟಿ-20 ವಿಶ್ವಕಪ್ ತನಕ ಆಡುವುದನ್ನು ನೋಡಲು ಬಯಸಿದ್ದೇನೆ ಎಂದಿದ್ದಾರೆ.

ಭಾರತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಧೋನಿಯನ್ನೇ ಹೆಚ್ಚು ಅವಲಂಬಿಸದೇ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟಿಗರಾದ ಅಜಿತ್ ಅಗರ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದರು.

ರಾಜ್‌ಕೋಟ್‌ನಲ್ಲಿ ನಡೆದಿದ್ದ ನ್ಯೂಝಿಲೆಂಡ್ ವಿರುದ್ಧದ 2ನೆ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಗೆಲುವಿಗೆ 197 ರನ್ ಗುರಿ ಪಡೆದಿದ್ದಾಗ 37 ಎಸೆತಗಳಲ್ಲಿ 49 ರನ್ ಗಳಿಸಿ ಮಂದಗತಿಯ ಬ್ಯಾಟಿಂಗ್ ಮಾಡಿದ್ದ ಧೋನಿ ಟೀಕೆಗೆ ಗುರಿಯಾಗಿದ್ದರು. ಈ ಪಂದ್ಯವನ್ನು ಭಾರತ 40 ರನ್‌ಗಳಿಂದ ಸೋತಿತ್ತು.

‘‘ಮಾಜಿ ನಾಯಕ ಧೋನಿ ಎಷ್ಟು ಸಮಯ ಆಡುತ್ತಾರೋ,ಅಷ್ಟು ಸಮಯ ಅವರಿಗೆ ಆಡಲು ಅವಕಾಶ ನೀಡಬೇಕು. ಒಂದು ವೇಳೆ ನಾನು ಕೋಚ್ ಇಲ್ಲವೇ ನಾಯಕನಾಗಿದ್ದರೆ ಧೋನಿಗೆ ಇನ್ನೂ ಎರಡರಿಂದ ಮೂರು ವರ್ಷ ಆಡಲು ಅವಕಾಶ ನೀಡುತ್ತಿದ್ದೆ’’ ಎಂದರು.

 

Comments (Click here to Expand)