varthabharthi

ಕ್ರೀಡೆ

ಆ್ಯಶಸ್ ಸರಣಿ

ಇಂಗ್ಲೆಂಡ್ ಉಪನಾಯಕನಾಗಿ ಆ್ಯಂಡರ್ಸನ್ ಆಯ್ಕೆ

ವಾರ್ತಾ ಭಾರತಿ : 10 Nov, 2017

ಲಂಡನ್, ನ.10: ಮುಂಬರುವ ಆ್ಯಶಸ್ ಸರಣಿಯಲ್ಲಿ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

35ರ ಹರೆಯದ ಆ್ಯಂಡರ್ಸನ್ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬದಲಿಗೆ ಉಪನಾಯಕನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬ್ರಿಸ್ಟಾಲ್‌ನಲ್ಲಿನ ನೈಟ್‌ಕ್ಲಬ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸ್ಟೋಕ್ಸ್ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಕಾರಣ ತಾತ್ಕಾಲಿಕವಾಗಿ ತಂಡದಿಂದ ಅಮಾನತುಗೊಂಡಿದ್ದಾರೆ.

 

Comments (Click here to Expand)