varthabharthi

ಕ್ರೀಡೆ

ಸೌರಾಷ್ಟ್ರ 570 ರನ್: ದ್ವಿಶತಕ ವಂಚಿತ ಪೂಜಾರ

ವಾರ್ತಾ ಭಾರತಿ : 10 Nov, 2017

ರಾಜ್‌ಕೋಟ್, ನ.10: ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ 570 ರನ್ ಗಳಿಸಿ ಆಲೌಟಾಗಿದೆ.

2ನೆ ದಿನವಾದ ಶುಕ್ರವಾರ 182 ರನ್ ಗಳಿಸಿ ಔಟಾದ ನಾಯಕ ಪೂಜಾರ ಸತತ ಎರಡನೆ ದ್ವಿಶತಕ ಬಾರಿಸುವುದರಿಂದ ವಂಚಿತರಾದರು. ಪೂಜಾರ ಇನ್ನೋರ್ವ ಶತಕವೀರ ಸ್ನೆಲ್ ಪಟೇಲ್(156) ಅವರೊಂದಿಗೆ 2ನೆ ವಿಕೆಟ್‌ಗೆ 253 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು.

 ಸೌರಾಷ್ಟ್ರ ದಿನದ ಮೊದಲ ನಾಲ್ಕು ಓವರ್‌ಗಳಲ್ಲಿ ಸ್ನೆಲ್ ಪಟೇಲ್, ಶೆಲ್ಡನ್ ಜಾಕ್ಸನ್ ಹಾಗೂ ರವೀಂದ್ರ ಜಡೇಜ(8) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಆಗ ಜೈದೇವ್ ಶಾ(46) ಅವರೊಂದಿಗೆ 69 ರನ್ ಹಾಗೂ ಪ್ರೇರಕ್ ಮಂಕಡ್(62) ಅವರೊಂದಿಗೆ 53 ರನ್ ಸೇರಿಸಿದ ಪೂಜಾರ ತಂಡದ ಹೋರಾಟ ಮುಂದುವರಿಸಿದರು.

17ರ ಹರೆಯದ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ 154 ರನ್‌ಗೆ 4 ವಿಕೆಟ್ ಉರುಳಿಸಿ ಗಮನ ಸೆಳೆದರು.

ಮೊದಲ ಇನಿಂಗ್ಸ್ ಆರಂಭಿಸಿರುವ ಗುಜರಾತ್ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು.ಆರಂಭಿಕ ಆಟಗಾರರಾದ ಪೃಥ್ವಿ ಪಟೇಲ್(ಅಜೇಯ29) ಹಾಗೂ ಪ್ರಿಯಾಂಕ ಪಾಂಚಾಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)