varthabharthi

ಕ್ರೀಡೆ

ಮಾಜಿ ಟೆಸ್ಟ್ ಕ್ರಿಕೆಟಿಗ ಎ.ಜಿ. ಮಿಲ್ಖಾ ಸಿಂಗ್ ನಿಧನ

ವಾರ್ತಾ ಭಾರತಿ : 10 Nov, 2017

ಚೆನ್ನೈ, ನ.10: ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ ಎಜಿ ಮಿಲ್ಖಾ ಸಿಂಗ್ (75 ವರ್ಷ) ಚೆನ್ನೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಿಲ್ಖಾ ಸಿಂಗ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

60ರ ದಶಕದ ಆದಿಯಲ್ಲಿ ಮಿಲ್ಖಾ ಸಿಂಗ್ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಸಿಂಗ್‌ರ ಹಿರಿಯ ಸಹೋದರ ಕೃಪಾಲ್ ಸಿಂಗ್ ಕೂಡ ಭಾರತದ ಪರ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1961-62ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಈ ಇಬ್ಬರು ಸಹೋದರರು ಒಟ್ಟಿಗೆ ಆಡಿದ್ದರು.

ಎಡಗೈ ಬ್ಯಾಟ್ಸ್‌ಮನ್‌ಹಾಗೂ ಉತ್ತಮ ಫೀಲ್ಡರ್ ಆಗಿದ್ದ ಮಿಲ್ಖಾ ಸಿಂಗ್ 17ರ ಹರೆಯದಲ್ಲಿ ರಣಜಿ ಟ್ರೋಫಿಗೆ ಕಾಲಿಟ್ಟಿದ್ದರು. 18ನೆ ವಯಸ್ಸಿನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ರಣಜಿ ಟ್ರೋಫಿಯಲ್ಲಿ ಮದ್ರಾಸ್(ಈಗಿನ ತಮಿಳುನಾಡು) ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8 ಶತಕಗಳ ಸಹಿತ 4,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಮಿಲ್ಖಾ ಸಿಂಗ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿದ್ದರು. ಅವರ ಅಳಿಯ ಅರ್ಜನ್ ಕೃಪಾಲ್ ಸಿಂಗ್ ತಮಿಳುನಾಡು ಪರ ರಣಜಿ ಟ್ರೋಫಿ ಆಡಿದ್ದರು. 1987ರಲ್ಲಿ ಗೋವಾ ವಿರುದ್ಧ ಸ್ಮರಣೀಯ ತ್ರಿಶತಕ ಬಾರಿಸಿದ್ದರು.

 

Comments (Click here to Expand)