varthabharthi

ಗಲ್ಫ್ ಸುದ್ದಿ

ಕೆಸಿಎಫ್: ಮದೀನಾ ಮುನವ್ವರ ಸೆಕ್ಟರ್ ವತಿಯಿಂದ ತರಗತಿ

ವಾರ್ತಾ ಭಾರತಿ : 11 Nov, 2017

ಮದೀನಾ, ನ. 11: ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ವತಿಯಿಂದ ವಿಶೇಷ ಸಂಘಟನಾ ತರಗತಿ 'Adelanto 2017' ಕೆ.ಸಿ.ಎಫ್ ಭವನ ಮದೀನಾ ಮುನವ್ವರರದಲ್ಲಿ ನಡೆಯಿತು.

ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷ ಫಾರೂಖ್ ನಯೀಮಿ ಸರಳಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ  ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಇಂಟರ್ ನ್ಯಾಶನಲ್ ಕೌನ್ಸಿಲ್‌ ಅಧ್ಯಕ್ಷ ಎಸ್.ಪಿ. ಹಂಝ  ಸಖಾಫಿ ಬಂಟ್ವಾಳ  ಮಾತನಾಡಿದರು.

ದಾರುಲ್ ಇರ್ಶಾದ್ ಮಾಣಿ ಇದರ ಆರ್ಗನೈಸರ್ ಉಮರ್ ಸಖಾಫಿ ಪರಪ್ಪು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇದೇ ವೇಳೆ ಕೆ.ಸಿ.ಎಫ್ ಇಂಟರ್ ನ್ಯಾಶನಲ್ ಕೌನ್ಸಿಲ್‌ ಅಧ್ಯಕ್ಷ ಎಸ್.ಪಿ ಹಂಝ ಸಖಾಫಿ ಉಸ್ತಾದರಿಗೆ ಕೆಸಿಎಫ್ ಮದೀನಾ ಸೆಕ್ಟರ್ ವತಿಯಿಂದ ಸ್ಮರಣೆಕೆ ನೀಡಿ ಗೌರವಿಸಲಾಯಿತು.

ಈ ವೇಳೆ ಸೆಕ್ಟರ್ ನಾಯಕರಾದ ಇಸ್ಮಾಯಿಲ್ ಸಅದಿ ಬೇಂಗಿಲ,ಇಸ್ಮಾಯಿಲ್ ಕಿನ್ಯಾ, ಅಶ್ರಫ್ ಕಿನ್ಯಾ, ರಝಾಕ್ ಬೈತಡ್ಕ, ಅಶ್ರಫ್ ದೇರಳಕಟ್ಟೆ  ರಝಾಕ್ ಉಳ್ಳಾಲ್, ಸುಲೈಮಾನ್ ತುರ್ಕಳಿಕೆ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಅಬೂಬಕ್ಕರ್ ಮುಸ್ಲಿಯಾರ್ ಉದ್ದಬೆಟ್ಟು ಸ್ವಾಗತಿಸಿ, ಉಮರ್ ಗೇರುಕಟ್ಟೆ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)