varthabharthi

ಗಲ್ಫ್ ಸುದ್ದಿ

ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಕೋಡಿಜಾಲ್: ಜಿಸಿಸಿ ಘಟಕದ ವಾರ್ಷಿಕ ಮಹಾಸಭೆ

ವಾರ್ತಾ ಭಾರತಿ : 11 Nov, 2017

ದಮ್ಮಾಮ್, ನ. 11: ಖಿದ್ಮತುಲ್ ಇಸ್ಲಾಂ  ಅಸೋಸಿಯೇಶನ್ ಕೋಡಿಜಾಲ್, ಜಿಸಿಸಿ ಘಟಕ ಇದರ 10ನೇ ವಾರ್ಷಿಕ ಮಹಾಸಭೆಯು  ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ಅಧ್ಯಕ್ಷತೆಯಲ್ಲಿ ಸೌದಿ ಅರೇಬಿಯಾದ ದಮ್ಮಾಮ್  ಅಲ್ ಮುಖ್ಖಾಯಂ ವಿಂಟರ್ ಕ್ಯಾಮ್ಪ್  ನಲ್ಲಿ  ಶುಕ್ರವಾರ ನಡೆಯಿತು.

ಜಿಸಿಸಿ ಘಟಕದ ಕಾರ್ಯದರ್ಶಿ ಆಸಿಫ್ ಬ್ರಿಕ್ಸ್ ವರದಿ ವಾಚಿಸಿದರು. ಕೋಶಾಧಿಕಾರಿ ಅಝರ್ ಎಜಿಟಿ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ  ಅನ್ವರ್ ಕೆ ಎಂ ಕೆ, ಕಾರ್ಯದರ್ಶಿ ಆಸಿಫ್ ಬ್ರಿಕ್ಸ್, ಕೋಶಾಧಿಕಾರಿ ಅಝರ್ ಎಜಿಟಿ, ಮಾಜಿ ಅಧ್ಯಕ್ಷ ರಹೀಮ್ ಕೋಡಿಜಾಲ್, ಮುಸ್ತಫಾ, ಶರೀಫ್ ಪಾವೂರು ಮತ್ತಿತರು ಉಪಸ್ಥಿತರಿದ್ದರು.

ನಮ್ಮ ಸಭೆಗೆ ವಿಶೇಷ ಅಹ್ವಾನಿತ ಅತಿಥಿಯಾಗಿ ಆಗಮಿಸಿದ ಕೋಡಿಜಾಲ್ ರಿಫಾಯೀ  ಜುಮಾ ಮಸಿದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರನ್ನು ಸಮಿತಿಯ ವತಿ ಯಿಂದ  ಸನ್ಮಾನಿಸಲಾಯಿತು. 

ಸೌದಿಯ ಉದ್ಯೋಗಿ ಅಲಿ ಮುಸ್ಲೇ ಅಲ್ ಸಾರಿ ಅವರು ಅತಿಥಿಯನ್ನು  ಗೌರವಿಸಿದರು. ನೂತನ  ಪದಾಧಿಕಾರಿ  ಆಯ್ಕೆಯಲ್ಲಿ ಹಾಲಿ ಕಮಿಟಿ ಯನ್ನು ಮುಂದಿನ ಒಂದು ವರ್ಷಕ್ಕೆ ಮುಂದೂಡಲಾಯಿತು.

ಅಝೀಝ್ ಕೋಡಿಜಾಲ್ ಸ್ವಾಗತಿಸಿದರು.  ಅಸ್ಫರ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು. ನವಾಜ್  ಎ ಬಿ ಎಚ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)