varthabharthi

ಅಂತಾರಾಷ್ಟ್ರೀಯ

ಪಾಕ್: ಸಯೀದ್‌ನ 4 ಸಹಚರರ ಬಿಡುಗಡೆ

ವಾರ್ತಾ ಭಾರತಿ : 11 Nov, 2017

ಲಾಹೋರ್, ನ. 11: ಈ ವರ್ಷದ ಜನವರಿಯಿಂದ ಬಂಧನದಲ್ಲಿದ್ದ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್‌ನ ನಾಲ್ವರು ಸಹಚರರು ಬಿಡುಗಡೆಗೊಂಡಿದ್ದಾರೆ.

ಅವರ ಬಂಧನವನ್ನು ಮುಂದುವರಿಸಲು ನ್ಯಾಯಾಂಗ ಪರಿಶೀಲನೆ ಮಂಡಳಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸ್ವತಂತ್ರಗೊಂಡಿದ್ದಾರೆ.

ಪಾಕಿಸ್ತಾನದ ಪಂಜಾಬ್ ಸರಕಾರವು ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ಜನವರಿ 31ರಂದು ಬಂಧಿಸಿತ್ತು. 1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ವಯ ಅವರನ್ನು 90 ದಿನಗಳ ಕಾಲ ಬಂಧನದಲ್ಲಿರಿಸಲಾಗಿತ್ತು.

ಅವರ ಬಂಧನ ಅವಧಿಯನ್ನು ಮತ್ತೆ ಎರಡು ಅವಧಿಗೆ ವಿಸ್ತರಿಸಲಾಗಿತ್ತು.

ಬಂಧನವನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿ ಗೃಹ ಸಚಿವಾಲಯ ನೀಡಿದ ಸಮರ್ಥನೆಯಿಂದ ಮಂಡಳಿಯು ತೃಪ್ತಿಗೊಳ್ಳಲಿಲ್ಲ.

ಆದಾಗ್ಯೂ, ಸಯೀದ್‌ನ ಬಂಧನವನ್ನು 30 ದಿನಗಳ ಕಾಲ ವಿಸ್ತರಿಸಲಾಗಿದ್ದು, ನವೆಂಬರ್ 26ರವರೆಗೆ ಅವನು ಬಂಧನದಲ್ಲಿರುತ್ತಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)