varthabharthi

ಅಂತಾರಾಷ್ಟ್ರೀಯ

ಪಾಕ್ ಭಯೋತ್ಪಾದನೆಯ ಕೇಂದ್ರ ಬಿಂದು: ಬ್ರಿಟನ್ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್

ವಾರ್ತಾ ಭಾರತಿ : 11 Nov, 2017

ಲಂಡನ್, ನ. 11: ಪಾಕಿಸ್ತಾನ ‘ಭಯೋತ್ಪಾದನೆಯ ಕೇಂದ್ರ ಬಿಂದು’ ಎಂದು ಹೇಳುವ ಮೂಲಕ ಬ್ರಿಟನ್ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಅವರ ಆತ್ಮಚರಿತ್ರೆ ‘ಮೈ ಲೈಫ್, ಅವರ್ ಟೈಮ್ಸ್’ ಈ ವಾರ ಬಿಡುಗಡೆಗೊಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬ್ರೌನ್ 1997ರಿಂದ 2007ರವರೆಗೆ ಚಾನ್ಸಲರ್ ಆಗಿದ್ದರು ಹಾಗೂ ಬಳಿಕ, 2007ರಿಂದ 2010ರವರೆಗೆ ಬ್ರಿಟನ್ ಪ್ರಧಾನಿಯಾಗಿದ್ದರು.

ಭಾರತೀಯ ಮೂಲದ ನೇತ್ರ ಸರ್ಜನ್ ಹೆಕ್ಟರ್ ಚಾವ್ಲಾರೊಂದಿಗಿನ ಅನುಭವ ಅವರ ಪುಸ್ತಕದಲ್ಲಿ ಪ್ರಮುಖವಾಗಿ ಪ್ರಸ್ತಾಪಗೊಂಡಿದೆ. ಅವರದೇ ಲೇಬರ್ ಪಕ್ಷದ ನಾಯಕ ಟೋನಿ ಬ್ಲೇರ್ ಜೊತೆಗಿನ ಅವರ ವಿರಸ, 2008ರ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಹಾಗೂ 2003ರ ಇರಾಕ್ ಯುದ್ಧದಲ್ಲಿ ಬ್ರಿಟನ್‌ಗೆ ತಪ್ಪು ಮಾಹಿತಿ ನೀಡಲಾಗಿತ್ತು ಎಂಬ ಅವರ ಬೇಸರ- ಪುಸ್ತಕದಲ್ಲಿ ದಾಖಲಾಗಿದೆ.

‘‘ಎರಡು ಐಸಿಸ್ ಗುಂಪುಗಳು ಮತ್ತು ಹಕ್ಕಾನಿ ನೆಟ್‌ವರ್ಕ್ ನಿರಂತರವಾಗಿ ಬಾಂಬ್‌ಗಳನ್ನು ಸ್ಫೋಟಿಸುತ್ತಿವೆ ಹಾಗೂ ದಾಳಿಗಳನ್ನು ನಡೆಸುತ್ತಿವೆ. ಪಾಕಿಸ್ತಾನ ದುರ್ಬಲವಾಗಿದೆ ಹಾಗೂ ಭಯೋತ್ಪಾದನೆಯ ಕೇಂದ್ರ ಬಿಂದುವಾಗಿದೆ’’ ಎಂದು ಮಾಜಿ ಬ್ರಿಟನ್ ಪ್ರಧಾನಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)