varthabharthi

ಅಂತಾರಾಷ್ಟ್ರೀಯ

ಆಹಾರವನ್ನು ಯುದ್ಧಾಸ್ತ್ರವಾಗಿ ಬಳಸುತ್ತಿರುವ ದಕ್ಷಿಣ ಸುಡಾನ್

ವಾರ್ತಾ ಭಾರತಿ : 11 Nov, 2017

ವಿಶ್ವಸಂಸ್ಥೆ, ನ. 11: ದಕ್ಷಿಣ ಸುಡಾನ್ ಅಧ್ಯಕ್ಷ ಸಲ್ವ ಕೀರ್ ಸರಕಾರವು ಆಹಾರವನ್ನು ತನ್ನದೇ ನಾಗರಿಕರ ವಿರುದ್ಧ ಯುದ್ಧಾಸ್ತ್ರವಾಗಿ ಬಳಸುತ್ತಿದೆ ಹಾಗೂ ಕೆಲವು ಸ್ಥಳಗಳಲ್ಲಿ ಜೀವರಕ್ಷಕ ನೆರವು ನಾಗರಿಕರಿಗೆ ತಲುಪದಂತೆ ತಡೆ ಹಾಕಿದೆ ಎಂದು ವಿಶ್ವಸಂಸ್ಥೆಯ ವೀಕ್ಷಕರು ಭದ್ರತಾ ಮಂಡಳಿಗೆ ಸಲ್ಲಿಸಿದ ಗುಪ್ತ ವರದಿಯಲ್ಲಿ ಹೇಳಿದ್ದಾರೆ.

2016 ಮತ್ತು 2017ರಲ್ಲಿ ವಾಯುವ್ಯದ ಪಟ್ಟಣ ವವು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸರಕಾರಿ ಸೈನಿಕರು ಜನಾಂಗೀಯ ಆಧಾರದಲ್ಲಿ ನಾಗರಿಕರ ವಿರುದ್ಧ ಕಾರ್ಯಾಚರಣೆ ನಡೆಸಿದರು ಹಾಗೂ ಒಂದು ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗುವಂತೆ ಮಾಡಿದರು ಎಂದು ವಿಶ್ವಸಂಸ್ಥೆಯ ವೀಕ್ಷಕರು ತಿಳಿಸಿದ್ದಾರೆ.

‘‘2017ರ ಹೆಚ್ಚಿನ ಅವಧಿಯಲ್ಲಿ ಜೀವ ರಕ್ಷಕ ಆಹಾರ ನೆರವು ಕೆಲವು ನಾಗರಿಕರಿಗೆ ತಲುಪುವುದನ್ನು ಸರಕಾರ ಉದ್ದೇಶಪೂರ್ವಕವಾಗಿ ತಡೆಯಿತು’’ ಎಂದು ವೀಕ್ಷಕರು ತಮ್ಮ ವರದಿಯಲ್ಲಿ ಬರೆದಿದ್ದಾರೆ.

 

Comments (Click here to Expand)