ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಪುಟಿನ್ ಹೇಳಿದರು: ಟ್ರಂಪ್
ಹನೋಯ್ (ವಿಯೆಟ್ನಾಂ), ನ. 11: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಹಸ್ತಕ್ಷೇಪ ನಡೆಸಿಲ್ಲ ಎಂಬುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತನ್ನಲ್ಲಿ ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ವಿಯೆಟ್ನಾಂನ ಡನಂಗ್ ನಗರದಲ್ಲಿ ನಡೆದ ಎಪಿಇಸಿ ಶೃಂಗ ಸಮ್ಮೇಳನದಲ್ಲಿ ತಾನು ಪುಟಿನ್ ಜೊತೆ ಎರಡು ಅಥವಾ ಮೂರು ಬಾರಿ ಕಿರು ಸಂಭಾಷಣೆಗಳನ್ನು ನಡೆಸಿದೆ ಎಂಬುದಾಗಿ ವಿಯೆಟ್ನಾಂನ ಸರಕಾರಿ ಪ್ರವಾಸಕ್ಕಾಗಿ ರಾಜಧಾನಿ ಹನೋಯ್ಗೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
‘‘ತಾನು ಹಸ್ತಕ್ಷೇಪ ನಡೆಸಿಲ್ಲ ಎಂದು ಅವರು (ಪುಟಿನ್) ಹೇಳಿದರು. ನಾನು ಮತ್ತೊಮ್ಮೆ ಕೇಳಿದೆ. ತಾನು ಹಸ್ತಕ್ಷೇಪ ನಡೆಸಿಲ್ಲ ಎಂದರು’’ ಎಂದು ಟ್ರಂಪ್ ನುಡಿದರು.
Next Story