ವಿಶ್ವಕಪ್ ಪ್ಲೇ-ಆಫ್: ಇಟಲಿ ವಿರುದ್ಧ ಸ್ವೀಡನ್ ಗೆ ಜಯ
ಸ್ಟಾಕ್ಹೋಮ್, ನ.11: ಫಿಫಾ ವರ್ಲ್ಡ್ ಕಪ್ ಪ್ಲೇ-ಆಫ್ನ ಮೊದಲ ಪಂದ್ಯದಲ್ಲಿ ಇಂದು ಇಟಲಿ ವಿರುದ್ಧ ಸ್ವೀಡನ್ 1-0 ಅಂತರದಲ್ಲಿ ಗೆಲುವು ದಾಖಲಿಸಿದೆ. ಇದರೊಂದಿಗೆ ನಾಲ್ಕು ಬಾರಿ ವಿಶ್ವ ಚಾಂಪಿಯನ್ಶಿಪ್ಜಯಿಸಿರುವ ಇಟಲಿ ತಂಡ 60 ವರ್ಷಗಳ ಬಳಿಕ ಕೂಟದಿಂದ ಹೊರಬೀಳುವ ಭೀತಿಯನ್ನು ಎದುರಿಸುತ್ತಿದೆ. 1958ರಲ್ಲಿ ಸ್ವೀಡನ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಇಟಲಿ ಆಡುವ ಅರ್ಹತೆ ಪಡೆಯುವಲ್ಲಿ ವಿಫಲಗೊಂಡಿತ್ತು. ಸೋಮವಾರ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿದರೆ ಇಟಲಿಗೆ ವಿಶ್ವಕಪ್ಗೆ ಅರ್ಹತೆ ಪಡೆಯುವ ದಾರಿ ಬಂದ್ ಆಗಲಿದೆ. ಸ್ವೀಡನ್ ತಂಡದ ಬದಲಿ ಆಟಗಾರ ಜಾಕೋಬ್ ಜಾನ್ಸನ್ ದಾಖಲಿಸಿದ ಮೊದಲ ಅಂತಾರಾಷ್ಟ್ರೀಯ ಗೋಲು ನೆರವಿನಲ್ಲಿ ಸ್ವೀಡನ್ ಗೆಲುವಿನ ನಗೆ ಬೀರಿತು. ಜಾನ್ಸನ್ 61ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Next Story