varthabharthi

ಕ್ರೀಡೆ

ಗಾಯದ ಸಮಸ್ಯೆ ಎದುರಿಸುತ್ತಿರುವ ಸಾನಿಯಾ

ವಾರ್ತಾ ಭಾರತಿ : 12 Nov, 2017

ಮುಂಬೈ, ನ.12: ಭಾರತದ ಖ್ಯಾತ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ಮೊಣಕಾಲಿನ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

 ಸಾನಿಯಾ ಮಿರ್ಝಾ ಅವರಿಗೆ 2017ನೆ ವರ್ಷ ಅಷ್ಟೇನೂ ಉತ್ತಮವಾಗಿಲ್ಲ. ಗಾಯದಿಂದಾಗಿ ಅವರು ಹಲವು ವಾರಗಳ ಕಾಲ ಆಟದಿಂದ ದೂರ ಉಳಿಯಲಿದ್ದಾರೆ. ಗಾಯಕ್ಕೆ ಶಸ್ತ್ರ ಚಿಕಿತ್ಸೆ ನಡೆಸುವ ವಿಚಾರದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸಾನಿಯಾ ಮಿರ್ಝಾ ತಿಳಿಸಿದ್ದಾರೆ.

 ಸಾನಿಯಾ ಮಿರ್ಝಾ ಕಳೆದ ವರ್ಷ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಜೊತೆಯಾಟದಲ್ಲಿ 3 ಗ್ರಾನ್ ಸ್ಲಾಮ್ ಸೇರಿದಂತೆ 14 ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಮಾರ್ಟಿನಾ ಹಿಂಗಿಸ್ ಅವರೊಂದ ದೂರವಾದ ಬಳಿಕ ಅವರು ನಂ.12ಕ್ಕೆ ಇಳಿದಿದ್ದರು.

‘‘ನನ್ನ ಜೊತೆಯಾಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದರು. ಈ ಕಾರಣದಿಂದಾಗಿ 2017ನೆ ವರ್ಷ ನನ್ನ ಪಾಲಿಗೆ ಸವಾಲಿನ ವರ್ಷವಾಗಿತ್ತು. ಹೀಗಿದ್ದರೂ ರ್ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ ಎನ್ನಲು ಸಂತಸವಾಗುತ್ತಿದೆ’’ ಎಂದು ಸಾನಿಯಾ ಹೇಳಿದರು.

   ಸಾನಿಯಾ ಪ್ರಸ್ತುತ ಸಾಲಿನಲ್ಲಿ 8 ಮಂದಿ ಜೊತೆಗಾರರೊಂದಿಗೆ ಆಡಿದ್ದರು. 2017ರ ಆರಂಭದಲ್ಲಿ ಅಮೆರಿಕದ ಮ್ಯಾಟೆಕ್ ಸ್ಯಾಂಡ್ಸ್ ಜೊತೆ ಬ್ರಿಸ್ಬೇನ್ ಓಪನ್ ಜಯಿಸಿದ್ದರು.

 

Comments (Click here to Expand)