varthabharthi

ಅಂತಾರಾಷ್ಟ್ರೀಯ

ಗುಂಡಿನ ದಾಳಿಯಲ್ಲಿ ಭಾರತೀಯ ಕ್ಲಬ್ ಮಾಲೀಕ ಸಾವು

ವಾರ್ತಾ ಭಾರತಿ : 12 Nov, 2017

ನ್ಯೂಯಾರ್ಕ್, ನ. 12: ಗ್ರಾಹಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ-ಅಮೆರಿಕನ್ ಕ್ಲಬ್ ಮಾಲೀಕರೊಬ್ಬರು ಶನಿವಾರ ಮೃತಪಟ್ಟಿದ್ದಾರೆ.

ಕ್ಲಬ್‌ನ ಭದ್ರತಾ ಸಿಬ್ಬಂದಿ ಪ್ರತಿಯಾಗಿ ಗುಂಡು ಹಾರಿಸಿದಾಗ ಹಂತಕನೂ ಗಂಭೀರವಾಗಿ ಗಾಯಗೊಂಡಿದ್ದಾನೆ.

ನಾರ್ತ್ ಕ್ಯಾರಲೈನದ ಫಯೇಟ್‌ವಿಲ್ ನಗರದಲ್ಲಿರುವ ‘ನೈಟ್ಸ್ ಇನ್ ಆ್ಯಂಡ್ ಡೈಮಂಡ್ಸ್ ಜಂಟಲ್‌ಮನ್ಸ್ ಕ್ಲಬ್’ ಮಾಲೀಕ 40 ವರ್ಷದ ಆಕಾಶ್ ತಲಾಟಿ ಮೃತಪಟ್ಟವರು.

ಆರೋಪಿ ಮಾರ್ಕೀಸ್ ಡೆವಿಟ್ (23) ದಾಂಧಲೆ ನಡೆಸಿದಾಗ ಆತನನ್ನು ಕ್ಲಬ್‌ನಿಂದ ಹೊರಗೆ ಹಾಕಲಾಯಿತು. ಹೊರಗೆ ಹೋದ ಆತ ತನ್ನ ಕಾರಿನಿಂದ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)